ಕನ್ನಡ

ಶಾಲೆಯ ಪ್ರಕಾರ್ಯಗಳು

    ಕೌಶಲ್ಯ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಶಾಲೆ

  •   ಎಲ್ಲಾ ವಿವಿಧ ಕರಕುಶಲತೆಯನ್ನು ಉತ್ತೇಜಿಸುವುದು, ಅಭಿವೃದ್ಧಿಪಡಿಸುವುದು ಮತ್ತು ವಿನ್ಯಾಸಗೊಳಿಸುವುದು.
  • ಗ್ರಾಮೀಣ ಪ್ರದೇಶದಲ್ಲಿನ ಅತ್ಯಂತ ಕೌಶಲ್ಯ ಇರುವ ಗ್ರಾಮೀಣ ಕುಶಲಕರ್ಮಿಗಳನ್ನು ಗುರುತಿಸುವುದು ಮತ್ತು ಅವರ ಕೌಶಲ್ಯಗಳು ಇತರ ಕುಶಲಕರ್ಮಿಗಳಿಗೆ ಪ್ರಚುರಪಡಿಸುವುದು;
  • ವಿನೂತನ ಮತ್ತು ಉಪಯುಕ್ತ ಕೃಷಿ ಸಾಧನಗಳನ್ನು ಮತ್ತು ಸಲಕರಣೆಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು;
  • ವಿವಿಧ ಬಗೆಯ ಆಹಾರ ಧಾನ್ಯಗಳು, ಆಹಾರೋತ್ಪನ್ನಗಳು, ಹಣ್ಣುಗಳು ಮತ್ತು ತರಕಾರಿಗಳಿಗಾಗಿ ದಾಸ್ತಾನು ಸೌಕರ್ಯಗಳನ್ನು ಅನ್ವೇಷಿಸುವುದು, ವಿನ್ಯಾಸಮಾಡುವುದು ಮತ್ತು ಅಭಿವೃದ್ಧಿಪಡಿಸುವುದು;
  • ವಿವಿಧ ಬಗೆಯ ಕೃಷಿ, ಹೈನು, ಪ್ರಾಣಿ ಮತ್ತು ತೋಟಗಾರಿಕಾ ಉತ್ಪನ್ನಗಳಿಗಾಗಿ ಪ್ಯಾಕ್ ಮಾಡುವ ಸಾಮಗ್ರಿಯನ್ನು ಮತ್ತು ಸಂರಕ್ಷಣಾ ತಂತ್ರಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು;
  • ತೋಟಗಾರಿಕೆ ಮತ್ತು ಪುಷ್ಪ ಕೃಷಿ, ರೇಷ್ಮೆ ಕೃಷಿ ಮುಂತಾದ ಕ್ಷೇತ್ರದಲ್ಲಿ ವಿನೂತನ ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವುದು;
  • ಜಾಗತಿಕ ಮಾರುಕಟ್ಟೆಗಳ ಅವಶ್ಯಕತೆಗಳಿಗೆ ಪಾಲುದಾರರನ್ನು ಪರಿಚಯಿಸುವುದು;
  • ಸಿರಿಧಾನ್ಯಗಳು (millets) ತರಕಾರಿಗಳು ಮುಂತಾದA ಪೌಷ್ಠಿಕಾಂಶಯುಕ್ತ, ಕಡಿಮೆ ವೆಚ್ಚದ, ದೇಶೀಯ ಆಹಾರ ಉತ್ಪನ್ನಗಳ ಉತ್ಪಾದನೆಗಾಗಿ ರೈತರಿಗೆ ಉತ್ತೇಜನ ನೀಡುವುದು;
  • ದೇಶೀಯ ಮತ್ತು ಪೌಷ್ಠಿಕಾಂಶಯುಕ್ತ ಬೆಳೆಗಳು, ತರಕಾರಿ ಮತ್ತು ಹಣ್ಣುಗಳ ಮಾದರಿ ಕೃಷಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು;
  • ನಿಷ್ಕೃಷ್ಟ (precision) ಬೇಸಾಯಕ್ಕಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದಲ್ಲಿ ಕೃಷಿ ಭೂಮಿಗಳನ್ನು ದತ್ತು ತೆಗೆದುಕೊಳ್ಳುವುದು;
  • ಪಾಳುಭೂಮಿ, ಚವಳುಭೂಮಿ, ಜೌಗುಭೂಮಿ, ಕ್ಷಾರೀಯಭೂಮಿ ಹಾಗೂ ಇನ್ನಿತರ ಸಮಸ್ಯಾತ್ಮಕ ಭೂಮಿಗಳನ್ನು ಸಾಗುವಳಿ ಮತ್ತು ಪ್ರಯೋಜನದ ಅಡಿಯಲ್ಲಿ ತರಲು ಅವುಗಳಿಗಾಗಿ ವಿನೂತನ ವಿಧಾನಗಳನ್ನು ಮತ್ತು ಕಾರ್ಯತಂತ್ರಗಳನ್ನು ರೂಪಿಸುವುದು;
  • ನೀರು ಮತ್ತು ಇಂಧನದ ಸ್ವಾವಲಂಬನೆ ಮತ್ತು ಸಮರ್ಥ ಬಳಕೆಯನ್ನು ಸೃಜಿಸುವುದು;
  • ಹಣ್ಣು ಮತ್ತು ಮರಮುಟ್ಟುಗಳ ರೂಪದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳನ್ನು ಹಾಗೂ ಉಪಯುಕ್ತವಾಗುವ ಗಿಡಮರಗಳನ್ನು ಬೆಳೆಸಲು ಉತ್ತೇಜಿಸುವುದು ಮತ್ತು ಜೈವಿಕ ವೈವಿದ್ಯತೆಯನ್ನು ನಿರ್ವಹಿಸುವುದು;
  • ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಉದ್ಯಮಶೀಲತ್ವವನ್ನು ಉತ್ತೇಜಿಸಲು ಸಾಮರ್ಥ್ಯ ವೃದ್ಧಿಗಾಗಿ ಕ್ಷೇತ್ರೀಯ ಮತ್ತು ಕ್ಷೇತ್ರೀಯೇತರ ತರಬೇತಿ ಕಾರ್ಯಕ್ರಮಗಳನ್ನು, ಕಾರ್ಯಗಾರಗಳನ್ನು, ವಿಚಾರ ಸಂಕಿರಣಗಳನ್ನು ಆಯೋಜಿಸುವುದು;
  • ಆರ್ಥಿಕ ವ್ಯವಸ್ಥಾಪನೆಯಲ್ಲಿ ಹಿತಾಸಕ್ತರಿಗೆ ತರಬೇತಿ ನೀಡುವುದು;
  • ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲ ಲಭ್ಯತೆಯ ಬಗ್ಗೆ ಮಾಹಿತಿಯನ್ನು ಪ್ರಚುರಪಡಿಸುವುದು;
  • ವ್ಯಕ್ತಿಗತ ವ್ಯವಹಾರ ಯೋಜನೆಗಳು ಮತ್ತು ಅಂಕಣಿತ ಯೋಜನೆಗಳನ್ನು ಸಿದ್ಧಪಡಿಸುವುದು


ಸುದ್ದಿ ಮತ್ತು ಪ್ರಕಟಣೆ

15
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣಯಂದು ಧಜಾರೋಹಣವನ್ನು ಮಾನ್ಯ ಪ್ರಭಾರ ಕುಲಪತಿ ಪ್ರೊ . ಡಾ . ಸುರೇಶ ವಿ ನಾಡಗೌಡರವರು ನೆರೆವಾರಿಸಿದರು. Read More

ಕಾರ್ಯಕ್ರಮಗಳು

20
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ಡಿಪ್ಲೋಮ ಇನ್ ಕೋ ಓಪರೇಷನ್ ಅಂಡ್ ಬ್ಯಾಂಕಿಂಗ ಪ್ರಮಾಣ ಪತ್ರ ಪ್ರಧಾನ ಸಮಾರಂಭದ ಆಮಂತ್ರಣ ಪತ್ರಿಕೆ -ಆಗುಸ್ಟ್ 2024 Read More
15
Aug
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ Read More
12
Aug
ಮಾನ್ಯ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಶ್ರೀ ಆರಗಜ್ಞಾನೇಂದ್ರ ಅವರು ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ, ಇಲ್ಲಿಗೆ ದಿನಾಂಕ 16-ಆಗಸ್ಟ್ -2024 ರಂದು ಭೇಟಿ ನೀಡಿದರು. Read More
7
Aug
09-08-2024  ರಂದು ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಸ್ರೋ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಯೋಜಿಸಿದೆ Read More


Follow us on