ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು
ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು
ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು
ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಅಧ್ಯಯನ ಹಾಗೂ ಸಂಶೋಧನೆಗಾಗಿ ಒಂದು ಪ್ರತ್ಯೇಕ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ’ವು ಸ್ಥಾಪನೆಯಾಗಬೇಕೆನ್ನುವುದು, ಕ್ರಿಯಾಶೀಲರು ಹಾಗೂ ಅಂದಿನ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಎಚ್.ಕೆ.ಪಾಟೀಲ ಅವರ ಪರಿಕಲ್ಪನೆಯಾಗಿತ್ತು.ಅದರಂತೆ, ಅಂದಿನ ಮಾನ್ಯ ಮುಖ್ಯಮಂತ್ರಿಗಳು 2014-15 ಆಯವ್ಯಯ ಭಾಷಣದಲ್ಲಿ, ವಿಧಾನ ಸಭೆಯ ಎರಡೂ ಸದನಗಳಲ್ಲಿ ಅನುಮೋದನೆ ಪಡೆಯಲು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವನೆಯನ್ನು ಮಂಡಿಸಿದರು. ವಿಶ್ವವಿದ್ಯಾಲಯ ಸ್ಥಾಪನೆಯ ವಿಷಯದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಶ್ರೀ ಎಸ್. ವಿ.ರಂಗನಾಥ್, ಐ.ಎ.ಎಸ್, ನಿವೃತ್ತ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಇವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತು.
ಕ್ರ. ಸಂ. |
ಹೆಸರು |
ಪದನಾಮ |
1. |
ಶ್ರೀ ಎಸ್. ವಿ. ರಂಗನಾಥ್ ಐ.ಎ.ಎಸ್. ಮಾಜಿ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ. |
ಅಧ್ಯಕ್ಷರು |
2. |
ಶ್ರೀ ಆರ್.ಬಿ.ಅಗವಾನೆ ಐ.ಎ.ಎಸ್. ಮಾಜಿ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ. |
ಸದಸ್ಯರು |
3. |
ಡಾ. ಎಸ್. ಎ. ಪಾಟೀಲ ಮಾಜಿ ನಿರ್ದೇಶಕರು, ಐ.ಎ.ಆರ್.ಐ., ನವದೆಹಲಿ. |
ಸದಸ್ಯರು |
4. |
ಡಾ. ಎ. ಎನ್. ಯಲ್ಲಪ್ಪರೆಡ್ಡಿ ಐ.ಎಫ್.ಎಸ್.(ನಿವೃತ್ತ) |
ಸದಸ್ಯರು |
5. |
ಪ್ರೊ : ಬಿನಯ್‌ಕುಮಾರ್ ಪಟ್ನಾಯಕ್ ನಿರ್ದೇಶಕರು, ಐಸೆಕ್, ಬೆಂಗಳೂರು. |
ಸದಸ್ಯರು |
6. |
ಡಾ. ಸಿ. ಎಸ್. ಪಾಟೀಲ ಡೀನ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ. |
ಸದಸ್ಯರು |
7. |
ಶ್ರೀ ಪ್ರಕಾಶ್ ಭಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿ, ಸ್ಕೋಪ್, ಧಾರವಾಡ. |
ಸದಸ್ಯರು |
8. |
ಪ್ರೊ. ಹೆಚ್. ಬಿ. ವಾಲೇಕರ H.B. Walikar ವಿಶ್ರಾಂತ ಕುಲಪತಿಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. |
ಸದಸ್ಯರು |
9. |
ಡಾ. ಅರುಣ್ ಪಾಟೀಲ ವ್ಯವಸ್ಥಾಪಕ ನಿರ್ದೇಶಕರು, ಅಗಡಿ ಸನ್‌ರೈಸ್ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್, ಲಕ್ಷ್ಮೇಶ್ವರ. |
ಸದಸ್ಯರು |
10. |
ಶ್ರೀಮತಿ ನೀತಿ ಶರ್ಮ ಹಿರಿಯ ಉಪಾಧ್ಯಕ್ಷರು ಮತ್ತು ಸಹ ಸಂಸ್ಥಾಪಕರು, ಟೀಮ್‌ಲೀಸ್ ಸಂಸ್ಥೆ, ಬೆಂಗಳೂರು. |
ಸದಸ್ಯರು |
11. |
ಡಾ. ಎಲ್.ಜಿ. ಹಿರೇಗೌಡರ ಕಾರ್ಯಕ್ರಮ ಸಂಘಟಕರು ಮತ್ತು ಮುಖ್ಯಸ್ಥರು, ಕೆ.ವಿ.ಕೆ. ಹುಲಕೋಟಿ. |
ಸದಸ್ಯರು |
12. |
ಶ್ರೀ ಕೆ. ಎನ್. ಜನಾರ್ಧನ ಮುಖ್ಯ ಯೋಜನಾ ಸಂಘಟಕರು, ನ್ಯಾಷನಲ್ ಅಕಾಡೆಮಿ ರುಡ್‌ಸೆಟ್, ಬೆಂಗಳೂರು. |
ಸದಸ್ಯರು |
13. |
ಶ್ರೀ ಸಯ್ಯದ್ ಜಮಾಲ ಮಾಜಿ ಆಡಳಿತಾಧಿಕಾರಿ, ಕೆ.ಇ.ಎ, ಬೆಂಗಳೂರು. Bengaluru |
Member-Secretary |
ಕರ್ನಾಟಕದ ಗ್ರಾಮೀಣ ಜನತೆಯ ಜೀವನ ಮಟ್ಟ ಸುಧಾರಣೆಗೆ ಗ್ರಾಮೀಣ ವಿಶ್ವವಿದ್ಯಾಲಯ ಯಾವ ರೀತಿ ನೆರವಾಗಬಹುದು ಎಂಬ ಹಲವಾರು ವಿಷಯಗಳ ಬಗ್ಗೆ ಸಮಿತಿಯು ಚರ್ಚೆ ನಡೆಸಿತು.ಗ್ರಾಮೀಣ ಜನತೆ ಸಾಮಾನ್ಯವಾಗಿ ಎದುರಿಸುತ್ತಿರುವ ಅಪೌಷ್ಠಿಕತೆ, ಹಸಿವು, ಬಡತನ ಮತ್ತು ನಿರುದ್ಯೋಗ, ವರ್ಗ ಮತ್ತು ಲಿಂಗ ತಾರತಮ್ಯತೆ, ಜೀವನೋಪಾಯ ಮತ್ತು ಭೂಮಿ ಕಳೆದುಕೊಳ್ಳುವಿಕೆ ಇತರ ವಿಷಯಗಳು ಪ್ರಮುಖವಾಗಿರುತ್ತವೆ.ನಗರ ಪ್ರದೇಶದ ಉದ್ದಿಮೆಗಳಲ್ಲಿ ಮತ್ತು ಸೇವಾವಲಯದಲ್ಲಿ ಹಲವಾರು ಉದ್ಯೋಗ ಅವಕಾಶಗಳಿದ್ದರೂ ಗ್ರಾಮೀಣ ಯುವಕರು ನಿರುದ್ಯೋಗಿಗಳಾಗಿರುತ್ತಾರೆ.ಇದಕ್ಕೆ ಪ್ರಮುಖ ಕಾರಣ ಆಯಾ ಕ್ಷೇತ್ರಕ್ಕೆ ಬೇಕಾಗುವ ಕೌಶಲ್ಯಾಭಿವೃದ್ಧಿ ತರಬೇತಿ ಇಲ್ಲದೇ ಇರುವುದಾಗಿದೆ.ಉದ್ದೇಶಿತ ಕೌಶಲ್ಯ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಶಾಲೆ ಇದನ್ನು ಒದಗಿಸಲಿದೆ.
ಸಮಿತಿಯು ದೇಶದ ಹಲವಾರು ಸಂಸ್ಥೆಗಳಿಗೆ ಅಂದರೆ, ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ (IRMA), ಆನಂದ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್ (NIRD) ಹೈದರಾಬಾದ್, ಗಾಂಧಿಗ್ರಾಮ ರೂರಲ್ ಇನ್ಸ್ಟಿಟ್ಯೂಟ್, ದಿಂಡಿಗಲ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಅಹಮದಾಬಾದ್, ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (TISS), ಮುಂಬೈ, ಮುಂತಾದವುಗಳಿಗೆ ಭೇಟಿ ನೀಡಿತು. ಗ್ರಾಮೀಣ ಪ್ರದೇಶದ ಹಲವಾರು ಸಮಸ್ಯೆಗಳನ್ನು ಪರಿಹರಿಸುವ, ಸಮರ್ಪಣಾ ಭಾವದ, ಬದ್ಧತೆಯುಳ್ಳ ಜನಶಕ್ತಿಯನ್ನು ರೂಪಿಸುವ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಮೂಲಕ ಸಾಧಿಸಬಹುದಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತು.ಈ ಕಾರ್ಯವನ್ನು ಸಾಧಿಸಲು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಸ್ಥಾಪನೆ ಅವಶ್ಯಕ ಎಂದು ಶಿಫಾರಸ್ಸು ಮಾಡಿತು. ಹಾಗಾಗಿ ನಾಲ್ಕು ಹೆಚ್ಚುವರಿ ಶಾಲೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಯಿತು.
ತಜ್ಞರ ಸಮಿತಿಯು ನೀಡಿದ ವರದಿಯನ್ನಾಧರಿಸಿ “ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಅಧಿನಿಯಮ, 2016” ರನ್ವಯ ವಿಶ್ವವಿದ್ಯಾಲಯ ಸ್ಥಾಪನೆಗೆ ಅಧಿಸೂಚಿಸಲಾಯಿತು. ಬೋಧನೆ, ತರಬೇತಿ ಮತ್ತು ಅಧ್ಯಯನದ ಮೂಲಕ ಕರ್ನಾಟಕ ರಾಜ್ಯದ ಗ್ರಾಮೀಣ ಪಂಚಾಯತ್ ಸಂಸ್ಥೆಗಳ ಸುಸ್ಥಿರ ಅಭಿವೃದ್ಧಿಗಾಗಿ ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಈ ಅಧಿನಿಯಮವು ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವಿಕೆ ಮತ್ತು ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳ ಅಭ್ಯಾಸ ಮತ್ತು ಅಧ್ಯಯನ ಮಾಡುವುದರ ಮೂಲಕ ಸಮಗ್ರವಾಗಿ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ.ಅAದಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು,
ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಕೆ.ಪಾಟೀಲ್ ರವರ ದೂರ ದೃಷ್ಠಿಯ ಮಾರ್ಗದರ್ಶನ ಹಾಗೂ ಅಂದಿನ ಇಲಾಖಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಡಾ.ಎನ್. ನಾಗಾಂಬಿಕಾ ದೇವಿ ಅವರ ಬೆಂಬಲದಿಂದ ರೂಪುಗೊಂಡಿದೆ. 2017-18ನೇ ಶೈಕ್ಷಣಿಕ ಸಾಲಿನಿಂದ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಕಾರ್ಯಗಳನ್ನು ಪ್ರಾರಂಭಿಸಿದೆ.
ದೃಷ್ಟಿ
ವಿಶ್ವವಿದ್ಯಾಲಯದ ದೃಷ್ಟಿಯು ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನತೆಯ ಜೀವನ ಗುಣಮಟ್ಟವನ್ನು ವಿಶಾಲ ಹರವಿನ ಸುಧಾರಣೆಯನ್ನು ಖಚಿತಪಡಿಸುವ ಗ್ರಾಮೀಣಾಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಹ ಸಮರ್ಪಣಾ ಮನೋಭಾವದ, ಬದ್ಧತೆಯುಳ್ಳ ಮಾನವ ಸಂಪನ್ಮೂಲವನ್ನು ಸೃಜಿಸುವ ಮೂಲಕ ಗ್ರಾಮೀಣ ಸಮಾಜದ ಉತ್ಕೃಷ್ಟ ಕೇಂದ್ರವಾಗಿಸಲು ಕಾರ್ಯಮಗ್ನವಾಗುವುದು.
ಗುರಿ
ವಿಶ್ವವಿದ್ಯಾಲಯದ ಗುರಿಯು ಬಡತನವನ್ನು ಕಡಿಮೆ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜನರು ತಮ್ಮದೇ ಆದ ಕ್ಷೇಮಾಭಿವೃ ಆರ್ಥಿಕ ಮತ್ತು ಸಾಮಾಜಿಕ, ರಾಜಕೀಯ ಪ್ರಗತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಪಂಚಾಯತ್ ರಾಜ್ ಸಂಸ್ಥೆಗಳು ಪ್ರಜಾಪ್ರಭುತ ವ್ಯವಸ್ಥೆಯ ಮೂಲಕ ಅಂತರ್ಗತ ಬೆಳವಣಿಗೆಗೆ ಕಾರಣವಾಗುವ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗಳಲ್ಲಿ ಅಗತ್ಯ ಸೇವೆಗಳನ್ನು ನೀಡಲು ಅವಕಾಶವೀಯುವ ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ವಿವಿಧ ಪಾಲುದಾರರಿಗೆ ಶಿಕ್ಷಣ ಮತ್ತು ತರಬೇತಿ ನೀಡುವುದಾಗಿದೆ.
ಧ್ಯೇಯೋದ್ದೇಶಗಳು
ಬೋಧನೆ, ಕಲಿಕೆ ಮತ್ತು ಸಂಶೋಧನೆಯಲ್ಲಿ ಉತ್ಕೃಷ್ಟತೆಯೆಡೆಗೆ ಸತತ ಗಮನವನ್ನು ನೀಡುವುದು;
ಬೆಳವಣಿಗೆ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿ ಮುಖಾಂತರ ಗ್ರಾಮೀಣ ಪ್ರದೇಶಗಳ ಸುಧಾರಣೆಗಾಗಿ ಉದ್ಭವಿಸುವ ಸವಾಲುಗಳನ್ನು ಕೈಗೆತ್ತಿಕೊಂಡು ತಂತ್ರಜ್ಞಾನ ವ್ಯವಸ್ಥಾಪನಾ ಶ್ರೇಣಿಯನ್ನು ಅಭಿವೃದ್ಧಿಪಡಿಸಲು ಉನ್ನತ ಶಿಕ್ಷಣವನ್ನು ರೂಪಿಸಿ, ಪ್ರೋತ್ಸಾಹಿಸಿ ಬೋಧಿಸುವುದು.
ಗ್ರಾಮೀಣಾಭಿವೃದ್ಧಿಯ ಸಂಕೀರ್ಣ ಮತ್ತು ವಿಭಿನ್ನ ವಿಚಾರಗಳಿಗೆ ಪರಿಹಾರಗಳನ್ನು ವಿನ್ಯಾಸಗೊಳಿಸಲು ಅಂತರ್ ವಿಷಯ (inter disciplinary) ಮತ್ತು ಸಮಗ್ರ ಬುನಾದಿಯ ಮೇಲೆ ಡಾಕ್ಟರೇಟ್, ಪೋಸ್ಟ್ ಡಾಕ್ಟರೇಟ್, ಸ್ನಾತಕೋತ್ತರ, ಸ್ನಾತಕ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಪದವಿಗಳನ್ನು ಪ್ರಧಾನ ಮಾಡಲು ಅನುವಾಗುವ ಕೋರ್ಸ್ಗಳನ್ನು ಆರಂಭಿಸುವುದು;
ಉದ್ಯೋಗಾವಕಾಶಗಳಿಗೆ ಹೆಚ್ಚು ಆಸ್ಪದವೀಯುವಂತಹ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ವ್ಯಾಸಂಗ ಕ್ರಮಗಳ ಜಾರಿಗಾಗಿ ಪ್ರತಿ ಯೊಂದು ಪ್ರದೇಶದಲ್ಲಿ (region) ಗ್ರಾಮೀಣಾಭಿವೃದ್ಧಿಯ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸುವುದು;
ಸಂಪರ್ಕ ಮೂಲಗಳನ್ನು ಎಂದರೆ, ಪ್ರಗತಿಪರ ರೈತರು, ಕೈಗಾರಿಕೋದ್ಯಮ (Industry houses) ಇತ್ಯಾದಿ ಬಳಸಿಕೊಂಡು ಕಲಿಕಾ ಕೇಂದ್ರವನ್ನು ಸ್ಥಾಪಿಸುವುದು. ಗ್ರಾಮೀಣ ಜನರು, ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು, ಜಿಲ್ಲಾ ಪಂಚಾಯತಿಗಳು, ಮುಂತಾದವುಗಳು ನಡೆದು ಬಂದ ಹಾದಿ (track record) ಗಮನಿಸಿ ಗ್ರಾಮೀಣಾಭಿವೃದ್ಧಿಯ ಆಯ್ದ ಚಟುವಟಿಕೆಗಳ ಕುರಿತಾಗಿ ಮಾದರಿ (ಪೈಲೆಟ್) ಪ್ರಾತ್ಯಕ್ಷಿಕಾ ಘಟಕಗಳನ್ನು ಸ್ಥಾಪಿಸುವುದು ಹಾಗೆಯೇ, ತಂತ್ರಜ್ಞಾನ ಪಾರ್ಕ್ ಮತ್ತು ಜೈವಿಕ ಗ್ರಾಮ ಸಂಪನ್ಮೂಲ ಕಲಿಕಾ ಕೇಂದ್ರಗಳನ್ನು ಸಹ ಸ್ಥಾಪಿಸುವುದು;
ಗ್ರಾಮೀಣಾಭಿವೃದ್ಧಿ ವಿಶೇಷ ವಿಷಯಗಳ ಕುರಿತಾಗಿ ಎಂದರೆ, ಸಾಮಾಜಿಕ ಸಂಪ್ರದಾಯಗಳ, ಕುಡಿಯುವ ನೀರು, ಜೈವಿಕ ಉರುವಲು ಮತ್ತು ಇಂಧನ, ಆಹಾರ ಮತ್ತು ಪೌಷ್ಠಿಕಾಂಶ, ಮೌಲಿಕ ಕೊಂಡಿ, ಕೌಶಲ್ಯತೆ ಮತ್ತು ಸರಕು ತಯಾರಿಕಾ ಘಟಕಗಳು, ಪ್ಯಾಕೇಜಿಂಗ್, ಬ್ರಾಂಡಿಂಗ್ ಮತ್ತು ಮಾರುಕಟ್ಟೆ, ಅಗತ್ಯ ನಗರ ಸೇವೆಗಳ ಕಾರ್ಯಜಾಲ (Network) ಹಾಗೂ ಗ್ರಾಮೀಣ ಬ್ರಾಡ್‌ಬಾಂಡ್ ಆನ್‌ಲೈನ್ ಅಂಶಗಳ ಮೂಲಕ ಅವುಗಳಿಗೆ ಅನುಕೂಲ ಕಲ್ಪಿಸುವುದು ಇತ್ಯಾಧಿಗಳ ಬಗೆಗೆ ಪೀಠಗಳನ್ನು ಮತ್ತು ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸುವುದು.
ಗ್ರಾಮೀಣಾಭಿವೃದ್ಧಿಗೆ ಸಹಕರಿಸಲು ಹಾಗೂ ಜನರ ಗ್ರಾಮೀಣ ಪ್ರಜ್ಞಾವಂತಿಕೆ ಮತ್ತು ಅನುಭವವನ್ನು ಶ್ರೀಮಂತಗೊಳಿಸಲು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಅತಿಥಿ ಉಪನ್ಯಾಸಕರನ್ನು ಅಹ್ವಾನಿಸುವುದು;
ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ನೇಕಗೊಂಡವರಿಗೆ ಪರಿಚಯ ಅಭಿವಿನ್ಯಾಸ (Orientation)ಕಾರ್ಯಕ್ರಮ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರತರಾದವರಿಗೆ ರಾಜ್ಯ ಸರ್ಕಾರದ ಸಹಯೋಗದಲ್ಲಿ ತರಬೇತಿ ಕಾರ್ಯಕ್ರಮ, ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪುನಶ್ಚೇತನ ಕಾರ್ಯಕ್ರಮ ಹಾಗೂ ವಿವಿಧ ಪ್ರಜಾತಾಂತ್ರಿಕ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು;
ಗ್ರಾಮೀಣಾಭಿವೃದ್ಧಿ ಅಧ್ಯಯನ ಮತ್ತು ಕಾರ್ಯಕ್ರಮಗಳ ಭವಿಷ್ಯದ ಯೋಜನೆಗಾಗಿ ಮತ್ತು ಸುಧಾರಣೆಗಾಗಿ ಗ್ರಾಮೀಣಾಭಿವೃದ್ಧಿಯಲ್ಲಿ ಸಮಕಾಲೀನ ಜ್ಞಾನವನ್ನು ಮೂಡಿಸುವ ಸಲುವಾಗಿ ಪ್ರಚಲಿತ ಸಂಗತಿಗಳನ್ನು ಆಧರಿಸಿ ವಾರ್ಷಿಕವಾಗಿ ಸಮಾವೇಶ, ಕಾರ್ಯಾಗಾರ, ವಿಚಾರ ಸಂಕಿರಣ ಮುಂತಾದುವುಗಳನ್ನು ಏರ್ಪಡಿಸುವುದು;
ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸಂಸ್ಥೆಗಳನ್ನು, ವಿಶ್ವವಿದ್ಯಾಲಯ ಹಾಗೂ ಇತರ ಸಂಘ-ಸಂಸ್ಥೆಗಳ ಸಹಭಾಗಿತ್ವದ ಕಾರ್ಯಜಾಲದ ಮೂಲಕ ವಿಶ್ವವಿದ್ಯಾಲಯದ ಬೋಧಕರು, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಸಮುದಾಯದವರನ್ನು ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯ ಎಲ್ಲಾ ಮಜಲುಗಳ ಕುರಿತು ಮೂಲಭೂತ, ಅನ್ವಯಿಕ ಮತ್ತ ತ್ರಂತ್ರಕುಶಲದಲ್ಲಿ ಪ್ರವೃತ್ತವಾದ ಸಂಶೋಧನೆಯನ್ನು ಕೈಗೊಳ್ಳವುದು.
ವಿಜ್ಞಾನ ಮತ್ತು ತಂತ್ರಜ್ಞಾನದ ಅಗತ್ಯಗಳಿಂದ ಗ್ರಾಮೀಣ ವಲಯದ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಈ ವಿಶ್ವವಿದ್ಯಾಲಯದ ಬೋಧಕವರ್ಗ, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಸಮುದಾಯವನ್ನು ಒಳಗೊಂಡ ಸುಸ್ಥಿರ ಅಭಿವೃದ್ಧಿಯ ನಿದರ್ಶನದೊಳಗೆ ಅವುಗಳನ್ನು ಬಗೆಹರಿಸುವುದು;
ಗ್ರಾಮೀಣ ಸಮಾಜವನ್ನು ಬಾಧಿಸುವಂತಹ ವಿವಿಧ ಪ್ರಖರತೆಯ ಸಂಭಾವ್ಯ ವಿಪತ್ತುಗಳನ್ನು ಕುರಿತು ಆಳವಾದ ಸಂಶೋಧನೆ ಮಾಡಿ ಈ ಎಲ್ಲಾ ಬಗೆಯ ಹಾನಿ ಮತ್ತು ಉದ್ಯಮಶೋಲತೆಗಾಗಿ ಈ ವಿಶ್ವವಿದ್ಯಾಲಯವು ಉತ್ಕೃಷ್ಟ ಕೇಂದ್ರವಾಗಿ ಕಾರ್ಯ ಪ್ರವೃತ್ತರಾಗುವಂತೆ ಮಾಡುವುದು;
ಸಮಗ್ರ ಗ್ರಾಮೀಣ ಅಭಿವೃದ್ಧಿಯೆಡೆಗೆ ಕಾರ್ಯನಿರ್ವಹಿಸಲು ಆಧುನಿಕ ಮಾಹಿತಿ, ಸಂಪರ್ಕ ತಂತ್ರಜ್ಞಾನಗಳನ್ನು ಬಳಸಿ ವಿಸ್ತರಣೆ, ಕೌಶಲ್ಯತೆ ಮತ್ತು ಉದ್ಯಮಶೀಲತೆಗಾಗಿ ಈ ವಿಶ್ವವಿದ್ಯಾಲಯವು ಉತ್ಕೃಷ್ಟ ಕೇಂದ್ರವಾಗಿ ಕಾರ್ಯ ಪ್ರವೃತ್ತರಾಗುವಂತೆ ಮಾಡುವುದು;
ನಾಲ್ಕು ಪ್ರಕಾರದ ಮಾಹಿತಿಗಳನ್ನೊಳಗೊಂಡ ಎಂದರೆ, ವೈಜ್ಞಾನಿಕ ಸಂಸ್ಥೆಗಳ ನಡುವಣ ಒಕ್ಕೂಟ (ಪ್ರಯೋಗಾಲಯದಿಂದ ಪ್ರಯೋಗಾಲಯಕ್ಕೆ), ಸಂಸ್ಥೆ ಮತ್ತು ಬಳಕೆದಾರರ ನಡುವೆ (ಪ್ರಯೋಗಾಲಯದಿಂದ ಭೂಮಿಗೆ), ಗ್ರಾಮೀಣ ಪಾರಂಪರಿಕ ಜ್ಞಾನ ನೆಲೆಯಿಂದ ತಾಂತ್ರಿಕ ಪರಿಣಿತರ ನಡುವೆ (ಭೂಮಿಯಿಂದ ಪ್ರಯೋಗಾಲಯಕ್ಕೆ) ಹಾಗೂ ಗ್ರಾಮೀಣ ಕುಟುಂಬಗಳ ನಡುವೆ ಪಾರ್ಶ್ವಿಕ ಕಲಿಕೆ (ಭೂಮಿಯಿಂದ ಭೂಮಿಗೆ) ನೈಜ ಅಕಾಡೆಮಿಯನ್ನು ವಿನ್ಯಾಸಿಸಿ ಚಾಲನೆ ನೀಡುವುದು;
ಅತಿ ಹಿಂದುಳಿದ ಪ್ರದೇಶ, ಗ್ರಾಮ ಅಥವಾ ಸಮುದಾಯಗಳ ಮೇಲೆ ವಿಶೇಷ ಆಸಕ್ತಿ ವಹಿಸುವ ಜೊತೆಗೆ, ಉದ್ಯಮಶೀಲತೆಗೆ ದಾರಿ ಮಾಡಿಕೊಡುವ ಪ್ರಾದೇಶಿಕ, ಗ್ರಾಮ ಮತ್ತು ಸಮುದಾಯದಲ್ಲಿನ ಯುವಜನರಲ್ಲಿ ನಾಯಕತ್ವ ಮತ್ತು ವ್ಯವಸ್ಥಾಪನಾ ಕೌಶಲ್ಯವನ್ನು ಬೆಳೆಸಿ-ಉಳಿಸಲು ನೆರವಾಗುವಂತಹ ವಿಶೇಷ ಸಾಂಸ್ಥಿಕ ಸಂರಚನೆ ಮತ್ತು ಯೋಜನೆಗಳನ್ನು ಸೃಜಿಸುವುದು;
ಗಾಂಧೀಜಿಯವರ ಚಿಂತನೆ (ಗ್ರಾಮ ಸ್ವರಾಜ್) ಆಧರಿಸಿ, ಸಮಗ್ರ ಮತ್ತು ಸುಸ್ಥಿರ ಗ್ರಾಮೀಣಾಭಿವೃದ್ಧಿ ಗುರಿ ಸಾಧಿಸಲು ವರ್ಗರಹಿತ, ಜಾತಿರಹಿತ ಹಾಗೂ ಜನಾಂಗರಹಿತ ಸಮಾಜವನ್ನು ಪ್ರವರ್ತಿಸುವ ಮುಖಾಂತರ ಸೇವೆಯನ್ನು ಒದಗಿಸಲು, ಉದ್ಯೋಗ ಮತ್ತು ಸಂಪತ್ತಿನ ಸೃಜನೆಯೆಡೆಗೆ ಕೊಂಡೊಯ್ಯಲು ಅಗತ್ಯವಿರುವ ಕಲಿಕಾ ಶಿಸ್ತು ಪ್ರಕಾರಗಳಲ್ಲಿ ಉದ್ಯಮಶೀಲತೆ ಅಭಿವೃದ್ಧಿಗಾಗಿ ತರಬೇತಿ, ಕೌಶಲ್ಯ ಮತ್ತು ವಿಶೇಷ ಪೋಷಣಾ ಸೌಕರ್ಯಗಳ ಪೂರೈಕೆಗಾಗಿ ಸರ್ವತೋಮುಖ ಅವಕಾಶಗಳನ್ನು ಒದಗಿಸುವುದು;
ಸಾಮಾನ್ಯ ಗ್ರಾಮ ಸಂಪನ್ಮೂಲ ಮತ್ತು ಸೇವಾ ಕೇಂದ್ರಗಳ ಮೂಲಕ ದುರ್ಬಲ ವರ್ಗದವರಿಗೆ, ಮಕ್ಕಳು, ಸ್ತ್ರೀಯರು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಗ್ರಾಮ ಸೇವೆಗಳಿಗೆ ಅನುಕೂಲ ಮಾಡಿಕೊಡುವುದು ಹಾಗೂ ಸಮಾಜದಲ್ಲಿ ಸಾಧ್ಯವಾಗುವ ಸಾಮಾಜಿಕ ನ್ಯಾಯ ಮತ್ತು ನ್ಯಾಯಸಮ್ಮತ ಸ್ಥಾನಮಾನವನ್ನು ಉತ್ತೇಜಿಸುವುದು.;
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಏಳಿಗೆಗಾಗಿ ತೀರ್ಮಾನ ಕೈಗೊಳ್ಳುವ ಸ್ವಾಯತ್ತತೆ ಮತ್ತು ಅವರನ್ನು ಜ್ಞಾನ ಮತ್ತು ಸಂಪನ್ಮೂಲಗಳಿಗೆ ಉತ್ತಮ ಪ್ರವೇಶ ನೀಡಿ ಸಜ್ಜುಗೊಳಿಸುವ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು;
ಪಾರಂಪರಿಕ ಜ್ಞಾನದೊಂದಿಗೆ ಸೂಕ್ತ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮೀಕರಿಸುವ ಮೂಲಕ ಸುಸ್ಥಿರ ತಂತ್ರಜ್ಞಾನ ಅಡಿಪಾಯ ಸೃಜಿಸುವ ಮೂಲಕ ಗ್ರಾಮೀಣ ಸಮಾಜದ ಸಾಂಸ್ಕೃತಿಕ ಸಂಪತ್ತು ಮತ್ತು ಪ್ರಾಯೋಗಿಕ ಜಾಣ್ಮೆಯನ್ನು ಸಂರಕ್ಷಿಸಿ ಶ್ರೀಮಂತಗೊಳಿಸುವುದು;
ಸಮಗ್ರ ಕೃಷಿ ಮಾರ್ಗ (ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ವೃಕ್ಷ ಕೃಷಿ, ರೇಷ್ಮೆ ಕೃಷಿ ಇತ್ಯಾದಿಗಳು) ಅಳವಡಿಕೆ, ಸಂಸ್ಕರಣೆ ಮೌಲ್ಯ ಸೇರ್ಪಡೆ (ಪೂರಕ ಕೃಷಿ), ಕೃಷಿಕರ ಉತ್ಪಾದನೆ ಮತ್ತು ಉತ್ಪನ್ನಗಳನ್ನು ಬಹುಹಂತಗಳ ಮಾರುಕಟ್ಟೆಗಳೊಂದಿಗೆ ಜೋಡಿಸುವ ಮೂಲಕ ಪ್ರಕೃತಿದತ್ತ ಸಂಪನ್ಮೂಲಗಳನ್ನು ನ್ಯಾಯಯುತವಾಗಿ ಬಳಸಿ ಕೃಷಿ ಆರ್ಥಿಕತೆಯನ್ನು ಉತ್ತಮಗೊಳಿಸುವುದು;
ನಿಸರ್ಗದತ್ತ ಸಂಪನ್ಮೂಲಗಳ ವಿವೇಕಯುತ ನಿರ್ವಹಣೆಯ ಗುರಿಯೊಂದಿಗೆ ಸಮುದಾಯಿಕ ಭಾಗೀದಾರಿಕೆ ಮತ್ತು ನಿರ್ವಹಣೆಯ ಮುಖಾಂತರ ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಭೂಫಲವತ್ತತೆ ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥಾಪನೆ, ಬೀಜ ನಿಧಿ, ರೂಢಿಗತ ಬಾಡಿಗೆ ಸೇವೆಗಳು, ಸಾವಯವ ಕೃಷಿ, ಅರಣ್ಯ ಕೃಷಿ, ಮೇವು ಬ್ಯಾಂಕ್‌ಗಳು, ಸಾಂಪ್ರದಾಯಿಕ ಗಿಡಮೂಲಿಕಾ ಔಷಧಗಳು, ಆರೋಗ್ಯ ಮತ್ತು ಪೌಷ್ಠಿಕಾಂಶ ರೂಪ, ಗ್ರಾಮೀಣ ಉದ್ಯಮಗಳು ಮತ್ತು ಮಾರುಕಟ್ಟೆಗಳಿಗಾಗಿ ಜೈವಿಕ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲು ಉತ್ತೇಜಿಸುವುದು;
ಗ್ರಾಮೀಣ ಆರ್ಥಿಕ ಸಮೃದ್ಧಿ ಮತ್ತು ಸುಧಾರಿತ ಜೀವನ ಗುಣಮಟ್ಟದೆಡೆಗೆ ಕೊಂಡೊಯ್ಯುವ ಗ್ರಾಮೀಣ - ನಗರ ಪ್ರತ್ಯೇಕತೆಯನ್ನು ತೊಡೆದು ಹಾಕಿ ಉತ್ತಮ ಬಾಂಧವ್ಯ ಸೃಜಿಸುವಂತಹ ನಗರ ಕೇಂದ್ರಿತ ಗ್ರಾಮೀನ ಸೇವೆ,ಪರಿಸರ ಪ್ರವಾಸೋದ್ಯಮ ಮುಂತಾದವುಗಳನ್ನು ಉತ್ತೇಜಿಸುವುದು;
ನಗರದ ಜನತೆಯೊಂದಿಗಿನ ಅಂತರವನ್ನು ತಗ್ಗಿಸಲು (ಕೃಷಿ, ಕೃಷಿಯೇತರ ಮತ್ತು ಕೃಷಿ ರಹಿತ ಉದ್ಯಮಗಳನ್ನು) ಗ್ರಾಮೀಣ ಸಮೂಹಗಳ ಉದ್ಯೋಗಾವಕಾಶ ಮತ್ತು ಆದಾಯ ಹೆಚ್ಚಿಸುವುದಕ್ಕಾಗಿ ಮಾದರಿ (ಪೈಲಟ್) ಆಧಾರದಲ್ಲಿ ಗ್ರಾಮೀಣ ಕುಟುಂಬ, ಸಮುದಾಯ, ಗ್ರಾಮ ಮತ್ತು ಪಂಚಾಯತ್ ಮಟ್ಟಗಳಲ್ಲಿ ಯೋಜನೆಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವುದು;
ಪರಿಣಾಮಕಾರಿ ತಂತ್ರಜ್ಞಾನಗಳ ನೆರವಿನಿಂದ ಕಿರು ಹಣಕಾಸು ಮತ್ತು ಕಿರು ಉದ್ಯಮಗಳ ಮೂಲಕ ಗ್ರಾಮೀಣ ಸಮೂಹಗಳಿಗೆ ಶಿಕ್ಷಣ ನೀಡುವುದರೊಂದಿಗೆ ಆರ್ಥಿಕಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡುವುದು;
ಅಂತರ್ಗತ ಬೆಳವಣಿಗೆಯನ್ನು ಸಾಧಿಸಲು ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಔಪಚಾರಿಕ ವಿತ್ತೀಯ ಸಂಸ್ಥೆಗಳ ಮುಖಾಂತರ ಸರ್ಕಾರಿ ಯೋಜನೆ, ಕಾರ್ಯಕ್ರಮ ಹಾಗೂ ಸಹಾಯಧನ ದಾರಿ ಸುಗಮವಾಗುವುದನ್ನು ಖಚಿತಪಡಿಸುವಲ್ಲಿ ಸ್ವ-ಸಹಾಯ ಸಂಘಗಳು, ಕೃಷಿ ಉತ್ಪಾದಕರ ಸಂಘಗಳು, ಕೃಷಿ ವ್ಯವಹಾರ ಕೇಂದ್ರಗಳು ಮತ್ತು ಸಾಮುದಾಯಿಕ ಪತ್ತಿನ ಸಂಘಗಳ ಸ್ಥಾಪನೆಯನ್ನು ಉತ್ತೇಜಿಸುವುದು;
ಸಾಮುದಾಯಿಕ ಮನರಂಜನಾ ಕಾರ್ಯಕ್ರಮಗಳು, ಹಬ್ಬ ಹರಿದಿನಗಳು, ಜಾತ್ರೆಗಳು ಹಾಗು ಇತರ ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಂಸ್ಥೆಗಳು, ಗ್ರಾಮೀಣ ಅಟೋಟಗಳು, ಯೋಗ-ಧ್ಯಾನ, ಗ್ರಾಮೀಣ ಆರೋಗ್ಯ ಚಿಕಿತ್ಸಾಲಯಗಳನ್ನು ಉತ್ತೇಜಿಸುವ ಮೂಲಕ ಉತ್ತಮ ಆಹಾರ ಹಾಗೂ ಪೌಷ್ಠಿಕಾಂಶಗಳ ನಿರ್ವಹಣೆಯನ್ನು ಸಾಧ್ಯವನ್ನಾಗಿಸಿ ಸಾಮಾಜಿಕ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುವುದು.
ಅಂತರ್ಗತ ಬೆಳವಣಿಗೆ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿಯತ್ತ ಗುರೀಕರಿಸಿದ ಗ್ರಾಮೀಣಾವಶ್ಯ ದೃಷ್ಟಿಕೋನದ ಕೋರ್ಸ್ ಮತ್ತು ಅಧ್ಯಯನಗಳ ಕೋರ್ಸುಗಳನ್ನು ಶ್ರೀಮಂತಗೊಳಿಸಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಔದ್ಯೋಗಿಕ ಶಿಕ್ಷಣ ವ್ಯವಸ್ಥೆಗೆ ನಿರಂತರವಾಗಿ ಪುಷ್ಠಿ ನೀಡುವುದು;
ಗ್ರಾಮೀಣಾಭಿವೃದ್ಧಿಯ ಎಲ್ಲಾ ವಿಷಯಗಳ ಕುರಿತಾಗಿ ಸಮಾಲೋಚನಾ ಸೇವೆ ಒದಗಿಸುವುದು;
ರಾಷ್ಟ್ರೀಯ, ರಾಜ್ಯ ಜಿಲ್ಲೆ, ತಾಲ್ಲೂಕು ಮತ್ತು ಪಂಚಾಯತ್ ಮಟ್ಟದಲ್ಲಿನ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ನೀತಿ ರಚನೆ, ಆಡಳಿತ ಮತ್ತು ವ್ಯವಸ್ಥಾಪನೆ ಜಾರಿಗೊಳಿಸುವುವಿಕೆಯಲ್ಲಿ ಸರ್ಕಾರಕ್ಕೆ ನೆರವಾಗುವುದು.
ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ನೀತಿ ರಚನೆ, ಆಡಳಿತ ಮತ್ತು ವ್ಯವಸ್ಥಾಪನೆ ಜಾರಿಗೊಳಿಸುವಿಕೆಯಲ್ಲಿ ಸರ್ಕಾರಕ್ಕೆ ನೆರವಾಗುವುದು;
ಸರ್ಕಾರವು ವಹಿಸಬಹುದಾದ ಯಾವುದೇ ಇತರ ಚಟುವಟಿಕೆಗಳನ್ನು ಕೈಗೊಳ್ಳುವುದು;
ಜ್ಞಾನೋದಾಯಿಕ (enlightened) ಕಲಿಕೆ, ಕ್ಷೇತ್ರ ಕಾರ್ಯ ಹಾಗೂ ಸಮುದಾಯದೊಂದಿಗೆ ಪಾಲ್ಗೊಳ್ಳುವಿಕೆಯ ಮೂಲಕ ನಾಯಕತ್ವ ಹಾಗೂ ವ್ಯವಸ್ಥಾಪನಾ ಸಾಮರ್ಥ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು;
ಗ್ರಾಮೀಣಾಭಿವೃದ್ಧಿ ಕಾರ್ಯ ಮತ್ತು ಸಾಮುದಾಯಿಕ ಸೇವೆಗಳಿಗೆ ಸಮರ್ಪಿಸುವತ್ತ ಬೋಧಕ ಮತ್ತು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರವಹಿಸುವಂತೆ ಮಾಡಲು ವಿಶಿಷ್ಟ ಮಾರ್ಗಗಳ ಕಲಿಕೆ, ವೃತ್ತಿಗಳ ಪ್ರಬುದ್ಧತೆ ಅಭಿವೃದ್ಧಿಪಡಿಸುವುದನ್ನು ಖಚಿತಪಡಿಸಲು ಶೈಕ್ಷಣಿಕ ಸ್ವಾತಂತ್ರವನ್ನು ಉತ್ತೇಜಿಸುವುದು ಮತ್ತು ಕಾಪಾಡುವುದು;
“ನಾವು ಜನರೊಂದಿಗೆ ಜೊತೆಗೂಡಿ ಕಲಿತು, ಜೊತೆಗೂಡಿ ಕೆಲಸ ಮಾಡಿ ಹಾಗೂ ಜೊತೆಗೂಡಿ ಬೆಳೆಯಬೇಕು” ಎನ್ನುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ, ಜನರ ಮತ್ತು ಪರಿವರ್ತನಾ ಪ್ರತಿನಿಧಿಗಳ (ಏಜೆಂಟ್) ನಡುವಿನ “ವಿಶ್ವಾಸ ಅಭಾವ ಕಂದರ”ವನ್ನು ತುಂಬಿ ಬೆಸೆಯಲು ಯತ್ನಿಸುವುದು;
ಕ್ಷೇತ್ರಾನುಭವಸ್ಥರಿಗೆ, ಸರ್ಕಾರೇತರ ಸಂಸ್ಥೆಗಳಿಗೆ, ಅನ್ವೇಷಣಾಕಾರರಿಗೆ, ಜನಪ್ರಿಯ ಸಾಮಾಜಿಕ “ಮುಕ್ತದ್ವಾರ ನೀತಿ" ಯನ್ನು ಅಳವಡಿಸಿಕೊಂಡು, ತನ್ನ ಬೋಧಕವರ್ಗದ ಬೋಧನಾ ಕಾರ್ಯಶಕ್ತಿಗೆ ಬೆಂಬಲಿತವಾಗಿ, ಅವರನ್ನು ಆಮಂತ್ರಿಸುವುದು;
"ಸಲಹಾ-ಸಮಾಲೋಚನಾ" ಅಂಗವಾಗಿ ಬೋಧಕರು ಸ್ವತ: ಗ್ರಾಮೀಣಾಭಿವೃದ್ಧಿ ಕಾರ್ಯವಿಧಾನಗಳ ಮುಂಚೂಣಿ (Cutting Edge) ವಿಚಾರಗಳ ಕುರಿತಾಗಿ ಬೋಧಕರು ಸ್ವತ: ಸಂಶೋಧನಾ ಯೋಜನೆಗಳಲ್ಲಿ ಕಾರ್ಯನಿರತರಾಗಿ ಪರಿಹಾರೋಪಾಯಗಳನ್ನು ಕಂಡುಹಿಡಿದು, ವಕಾಲತ್ತಿನ ಭಾಗವಾಗಿ, ಅಭಿವೃದ್ಧಿ ನೀತಿ ರಚನೆ ಕೈಂಕರ್ಯದಲ್ಲಿ ಸರ್ಕಾರಕ್ಕೆ ಸಲಹೆ ನೀಡುವುದು.
ವಕಾಲತ್ತು" ದ ಭಾಗವಾಗಿ, ಅಧ್ಯಾಪಕರು ಗ್ರಾಮೀಣ ಅಭಿವೃದ್ಧಿ ಪ್ರಕ್ರಿಯೆಯ ಅತ್ಯಾಧುನಿಕ ಸಮಸ್ಯೆಗಳ ಕುರಿತು ಸಂಶೋಧನಾ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮತ್ತು ಪರಿಹಾರಗಳೊಂದಿಗೆ ಹೊರಬರಲು ಮತ್ತು ಅಭಿವೃದ್ಧಿ ನೀತಿ ಚೌಕಟ್ಟನ್ನು ರೂಪಿಸುವಲ್ಲಿ ಸರ್ಕಾರಕ್ಕೆ ಸಲಹೆ ನೀಡಲು.
ವಿಶ್ವವಿದ್ಯಾಲಯವು ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಸಾಧಿಸುವ ದೃಷ್ಟಿಯನ್ನು ಹೊಂದಿದೆ.ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ ದೃಷ್ಟಿಕೋನಕ್ಕೆ ಅನುಗುಣವಾಗಿ, ವಿಶ್ವವಿದ್ಯಾಲಯದಲ್ಲಿ ನಾವು (ಂಖಖಿಇ ಎಂದು ಸಂಕ್ಷಿಪ್ತಗೊಳಿಸಲಾಗಿದೆ) ಒಂದು ವಿಶಿಷ್ಟ ಕಾರ್ಯಸೂಚಿಯನ್ನು ಅಳವಡಿಸಿಕೊಂಡಿದ್ದೇವೆ, ಇದು ಪಂಚಾಯತ್ ರಾಜ್ ಸಂಸ್ಥೆಗಳ ಸಮಗ್ರ ಮತ್ತು ಸುಸ್ಥಿರ ಗ್ರಾಮೀಣ ಅಭಿವೃದ್ಧಿಗೆ ಕಾರಣವಾಗುತ್ತದೆ.
ವಿಶ್ವವಿದ್ಯಾಲಯವು 2016 ರಿಂದ ಕಾರ್ಯಾರಂಭಿಸಿದ್ದು, ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು 2017 ನೇ ವರ್ಷದಿಂದ ಪ್ರಾರಂಭಿಸಿದೆ.ಪ್ರಸ್ತುತ ವಿಶ್ವವಿದ್ಯಾಲಯವು 5 ಅಧ್ಯಯನದ ಶಾಖೆಗಳ ಅಡಿಯಲ್ಲಿ ವಿವಿಧ ವಿಭಾಗಗಳಲ್ಲಿ 10 ಸ್ನಾತಕೋತ್ತರ ಹಾಗೂ 5 ಸ್ನಾತಕ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಒಂದು ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮ ಹಾಗೂ 2 ಡಿಪ್ಲೊಮಾ ವನ್ನು ಹಾಗೂ 1 ಸರ್ಟಿಫಿಕೇಟ್ ಕೋರ್ಸನ್ನು ಪ್ರಾರಂಭಿಸಿದೆ. ವಿಶ್ವವಿದ್ಯಾಲಯ ಪ್ರಾರಂಭದ ಸಂದರ್ಭದಲ್ಲಿ ಸುಮಾರು 100 ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆಯು 7 ವರ್ಷಗಳ ಅಲ್ಪಾವಧಿಯಲ್ಲಿ 1000 ಕ್ಕಿಂತ ಅಧಿಕವಾಗಿದೆ. ನಮ್ಮಲ್ಲಿ ಈಗ ಕರ್ನಾಟಕ ಮಾತ್ರವಲ್ಲದೆ ಭಾರತದ ಇತರ ರಾಜ್ಯಗಳ ವಿದ್ಯಾರ್ಥಿಗಳಿದ್ದಾರೆ. 2023-24ರ ಶೈಕ್ಷಣಿಕ ವರ್ಷದಲ್ಲಿ ಸುಮಾರು 1000ಕ್ಕಿಂತ ಹೆಚ್ಚು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿಧ ವಿಭಾಗಗಳಿಗೆ ಪ್ರವೇಶ ಪಡೆದಿದ್ದಾರೆ. ವಿಶ್ವವಿದ್ಯಾಲಯವು ಶೈಕ್ಷಣಿಕ, ಸಂಶೋಧನೆ, ಸಮುದಾಯ, ತರಬೇತಿ ಮತ್ತು ವಿಸ್ತರಣೆಯನ್ನು ಕೇಂದ್ರೀಕರಿಸಿ ಸುಮಾರು 40 ವಿವಿಧ ಯೋಜನೆಗಳು/ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ನುರಿತ, ಅನುಭವವುಳ್ಳ ಹಾಗೂ ಅರ್ಹ ಅಧ್ಯಾಪಕರುಗಳು ಐದು ಅಧ್ಯಯನ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಹಿರಿಯ ಮತ್ತು ಪ್ರಖ್ಯಾತ ಅಧ್ಯಾಪಕರುಗಳು ಗೌರವಾನ್ವಿತ ಸಂದರ್ಶಕ ಮತ್ತು ವಿಶ್ರಾಂತ ಪ್ರಾಧ್ಯಾಪಕರುಗಳು ಪಾಠ ಹಾಗೂ ಬೋಧನೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ವಿಶ್ವವಿದ್ಯಾಲಯದ ಉತ್ಕೃಷ್ಟತೆಯ ಅನ್ವೇಷಣೆಯನ್ನು ಮುನ್ನಡೆಸುವಲ್ಲಿ ಪ್ರಬುದ್ಧ ಮತ್ತು ಅನುಭವಿ ಕಾರ್ಯನಿರ್ವಾಹಕ ಪರಿಷತ್ ಮತ್ತು ಶೈಕ್ಷಣಿಕ ಪರಿಷತ್ ಕೊಡುಗೆಯು ಅಪಾರವಾಗಿದೆ.
The academic activities executed by five schools of study with young, energetic and qualified faculty memebers of the University from various disciplines, are duly supported and guided by senior and eminent teachers, Honorary visiting and Emeritus Professors. The contribution from the mature and experienced Executive Council and Academic Council who spearhead the University’s pursuit to excellence, is immensely motivating and I heartily acknowledge their pivotal role, support and guidance.
ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ನೆಲೆಯನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು, ಎರಡು ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಅವುಗಳೆಂದರೆ 1.ಸಂಶೋಧನೆ, ಅನ್ವೇಷಣೆ ಮತ್ತು ಮೌಲ್ಯಮಾಪನ ಕೇಂದ್ರ 2.ತರಬೇತಿ, ಪ್ರಕಟಣೆ ಮತ್ತು ಮೇಲ್ವಿಚಾರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನ ಅಸಂಖ್ಯಾತ ಕ್ಷೇತ್ರಗಳಲ್ಲಿ ಸಂಶೋಧನೆ, ಅನ್ವೇಷಣೆ ಮತ್ತು ತರಬೇತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. ಈ ಎರಡು ಸಂಸ್ಥೆಗಳ ಅಡಿಯಲ್ಲಿ ಸಂಶೋಧನಾ ಫೆಲೋಗಳು, ಸಿಬ್ಬಂದಿ ವರ್ಗ ಹಾಗೂ ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
Rural Immersion is an inbuilt activity in the course curriculum of the University where students spend 4 weeks in villages along with rural study is being carried out. This will sensitize and provide the participants exposure to life skills, culture, traditions, values and lifestyles of the rural community.
ಪ್ರಮುಖ ಸಾಧನೆಗಳು<
ವಿಶ್ವವಿದ್ಯಾಲಯವು 7 ವರ್ಷಗಳ ಅವಧಿಯಲ್ಲಿ, ಅನೇಕ ಸಾಧನೆಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದವುಗಳು:
ARTE- ಸಮಗ್ರ ಗ್ರಾಮೀಣ ಪರಿವರ್ತನೆಯನ್ನು ತರಲು ಶೈಕ್ಷಣಿಕ, ಸಂಶೋಧನೆ, ತರಬೇತಿ ಮತ್ತು ವಿಸ್ತರಣೆಯನ್ನು ಅಳವಡಿಸಿಕೊಳ್ಳುವುದು.
Putting sincere efforts to promote the ideals of Mahatma Gandhiji The creation of a replica of Sabarmati Ashram in the heart of the in the campus is a step in this direction. The ashram was built to commemorate the centenary of Mahatma Gandhi’s visit to Gadag on 11 November 1920.The Ashram has become the centre of inspiration to the University fraternity in paricular and the entire community at large. Scores of people throng the Ashram from far and near to experience the serenity and solitude of this hallowed memorial and get inspired with the Gandhian values and principles which are propagated through this centre.
ಗ್ರಾಮೀಣ ಆಧಾರಿತ ಸುಸ್ಥಿರ ಮತ್ತು ಸ್ಕೇಲೆಬಲ್ ನೀತಿಯ (Dessi) ಅನುಷ್ಠಾನಕ್ಕಾಗಿ ಬಹು-ಶಿಸ್ತಿನ ವಿಧಾನದ ಮೂಲಕ ಬೋಧನಾ ವಿಭಾಗದ ಸದಸ್ಯರು ಮತ್ತು ವಿದ್ಯಾರ್ಥಿಗಳ ಒಳಗೊಳ್ಳುವಿಕೆಯನ್ನು ಹೆಚ್ಚಿಸಲಾಗುತ್ತಿದೆ. ಈ ಯೋಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಗ್ರಾಮೀಣ ದೃಷ್ಟಿಕೋನ, ಮಾನ್ಯತೆ ಮತ್ತು ಕೆಲಸದ ಅನುಭವವನ್ನು ಒದಗಿಸುತ್ತದೆ. (Dessi) ಯೋಜನೆಯು 1.ಕೃಷಿ 2. ಹೂವು ಮತ್ತು ಔಷಧೀಯ ಸಸ್ಯಗಳನ್ನು ಹೊಂದಿರುವ 4000 ಕ್ಕೂ ಹೆಚ್ಚು ಅಲಂಕಾರಿಕ ಸಸ್ಯ ಸಂಗ್ರಹ 3. ಮಾದರಿ ನರ್ಸರಿ ಯೋಜನೆ, ಕೃಷಿ ಕೊಳ, ಹಸಿರು ಮನೆ 4.ಜೇನು ಕೃಷಿ (ಜೇನುನೊಣ ಸಾಕಣೆ) ಸಮಗ್ರ ಜಾನುವಾರು ಸಾಕಣೆ ಯೋಜನೆ 5. ಸಂಸ್ಕರಣೆ ಮತ್ತು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ. ಈ ಉಪಕ್ರಮಗಳ ಒಳಹರಿವು, ಭೂಮಿ ತಯಾರಿಕೆ, ಕೃಷಿ, ಬೆಳೆ ರಕ್ಷಣೆ, ಕೊಯ್ಲು, ಮೌಲ್ಯವರ್ಧನೆ ಮಾರಾಟ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯಿಂದ ಕೃಷಿ ವ್ಯವಹಾರದಲ್ಲಿ ಒಳಗೊಂಡಿರುವ ಎಲ್ಲಾ ಚಟುವಟಿಕೆಗಳನ್ನು ಸಂಯೋಜಿಸುತ್ತದೆ.
ಬಯಲು ಮತ್ತು ಗುಡ್ಡಗಾಡು ಪ್ರದೇಶದ ೭೫ ಎಕರೆ ಪ್ರದೇಶದಲ್ಲಿ ಹರಡಿರುವ ವಿವಿಧ ಜಾತಿಯ 50,000 ಕ್ಕೂ ಹೆಚ್ಚು ಸಸ್ಯಗಳೊಂದಿಗೆ ಜೀವವೈವಿಧ್ಯ ಉದ್ಯಾನವನವನ್ನು ಬೆಳೆಸುವುದು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಜೈವಿಕ ಇಂಧನ ಹೊರತೆಗೆಯುವ ಘಟಕವನ್ನು ಸ್ಥಾಪಿಸಲಾಗಿದೆ.
ತರಬೇತಿ ಕೇಂದ್ರದಲ್ಲಿ ನಡೆಸಲಾದ ಅಗತ್ಯ-ಆಧಾರಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಉದ್ಯಮಿಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಮತ್ತು ಎನ್‌ಜಿಒಗಳು, ಮಹಿಳೆಯರ ಸ್ವ-ಸಹಾಯ ಗುಂಪುಗಳ ಪ್ರಧಾನ ಗುರಿಯನ್ನು ರೂಪಿಸುತ್ತವೆ.
ಪರಸ್ಪರ ಮತ್ತು ಸಾಮಾನ್ಯ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಯೋಗವನ್ನು ಬೆಳೆಸಲು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳೊಂದಿಗೆ MOU ಗೆ ಪ್ರವೇಶಿಸುವುದು ಇನ್ನೂ ಕೆಲವು ಒಪ್ಪಂದಗಳು ಪ್ರಗತಿಯಲ್ಲಿವೆ. ಅವುಗಳಲ್ಲಿ ಪ್ರಮುಖವಾದವುಗಳು ICRISAT, NIRDPR, GRAAM, CMDR, KILA, MGNCRE ಮತ್ತು MYRADA, IRMA ಜೊತೆಗಿನ MOUಗಳು.
ಗ್ರಂಥಾಲಯ
ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 2017 ರಲ್ಲಿ ಸುಮಾರು 6961 ಪುಸ್ತಕಗಳ ಡಾಕ್ಯುಮೆಂಟ್ ಸಂಗ್ರಹಣೆಯನ್ನು ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸದಸ್ಯರಿಗೆ ಉಲ್ಲೇಖ ಮತ್ತು ಎರವಲು ಪಡೆಯಲು ಹಲವಾರು ನಿಯತಕಾಲಿಕಗಳನ್ನು ಪ್ರವೇಶಿಸುವ ಮೂಲಕ ಪ್ರಾರಂಭಿಸಲಾಯಿತು.ಅಂದಿನಿಂದ ಇದು ವಿಶ್ವವಿದ್ಯಾಲಯದ ಶೈಕ್ಷಣಿಕ ಉತ್ಕೃಷ್ಟತೆಗೆ ಕೊಡುಗೆ ನೀಡುತ್ತಿದೆ. `EASYLIB’ ಎಂಬ ಆಟೋಮೇಷನ್ ಸಾಫ್ಟ್ವೇರ್ ಬಳಸಿಕೊಂಡು ಗ್ರಂಥಾಲಯವನ್ನು ಸ್ವಯಂಚಾಲಿತಗೊಳಿಸಲಾಗಿದೆ.ಇದರ ಮೂಲಕ ಗ್ರಂಥಾಲಯದ ಎಲ್ಲಾ ಕಾರ್ಯಾಚರಣೆಗಳಾದ ಸರ್ಕ್ಯುಲೇಶನ್, ಕ್ಯಾಟಲಾಗ್, ಐಡಿ ಕಾರ್ಡ್ ಪ್ರಕ್ರಿಯೆ, OPAC ಸ್ಕ್ಯಾನಿಂಗ್ ಇತ್ಯಾದಿಗಳನ್ನು ನಿರ್ವಹಿಸಲಾಗುತ್ತದೆ.ಪ್ರಸ್ತುತ ಗ್ರಂಥಾಲಯವು 9900 ಕ್ಕೂ ಅಧಿಕ ಶೀರ್ಷಿಕೆಗಳನ್ನೊಳಗೊಂಡ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ 110 ನಿಯತಕಾಲಿಕಗಳೊಂದಿಗೆ ಹೊಂದಿದೆ.ಇ-ಪುಸ್ತಕಗಳು, ಇ-ಜರ್ನಲ್‌ಗಳನ್ನು ಪ್ರವೇಶಿಸಲು 100 mbps ವೇಗದ ಇಂಟರ್ನೆಟ್ ಸಂಪರ್ಕದೊಂದಿಗೆ 25 ಕಂಪ್ಯೂಟರ್‌ಗಳನ್ನು ಸ್ಥಾಪಿಸಲಾಗಿದೆ.ಲೈಬ್ರರಿ ವೈ-ಫೈ ಅನ್ನು ಸಕ್ರಿಯಗೊಳಿಸಿ ಗ್ರಂಥಾಲಯವನ್ನು ಸಜ್ಜುಗೊಳಿಸಲಾಗಿದೆ.
ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿರುವ ಸಮ್ಮೇಳನ/ ಸೆಮಿನಾರ್‌ಗಳು/ ವೆಬ್‌ನಾರ್‌ಗಳು
ಹಲವಾರು ಆಫ್‌ಲೈನ್ ಮತ್ತು ಆನ್‌ಲೈನ್ ಸಮ್ಮೇಳನಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ವೆಬ್‌ನಾರ್‌ಗಳನ್ನು ಆಯೋಜಿಸಲಾಗಿದೆ, ಅವುಗಳಲ್ಲಿ ಪ್ರಮುಖವಾದವುಗಳು:
'ಸ್ವರಾಜ್: ಸ್ವಯಂ ಆಡಳಿತದ ಸ್ಥಳೀಯ ಮಾದರಿಗಳು ಎಂಬ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ.
ಭಾರತಿಯ ಸಂವಿಧಾನದ 73 ನೇ ತಿದ್ದುಪಡಿಯ ಮೂರು ದಶಕಗಳಾಗಿದ್ದು “ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್: ಕರ್ನಾಟಕ ರಾಜ್ಯದಲ್ಲಿ ಒಂದು ಪಯಣ” ಎಂಬ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ.
Two-day NationalConference on “Senior Citizen Issues and Interventions”
NIDM ಸಹಯೋಗದೊಂದಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (GPDP) ಗೆ ವಿಪತ್ತು ಅಪಾಯ ಕಡಿತದ (DRR) ಏಕೀಕರಣ ಸಮ್ಮೇಳನ.
IIPA-KRB ಸಹಯೋಗದೊಂದಿಗೆ "ಸಾಂಕ್ರಾಮಿಕ ರೋಗಗಳ ನಿರ್ವಹಣೆ" ಕುರಿತು ರಾಷ್ಟ್ರೀಯ ಮಟ್ಟದ ವೆಬ್‌ನಾರ್.
ವಿಶ್ವವಿದ್ಯಾಲಯಕ್ಕೆ ಗಣ್ಯರ ಭೇಟಿ<
ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳ ಗಣ್ಯರನ್ನು ಸದಾ ಕಾಲ ಸ್ವಾಗತಿಸುತ್ತದೆ. ಅಂತಹ ಗಣ್ಯರು ವಿಶ್ವವಿದ್ಯಾಲಯದ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಬಹುಮುಖಿ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಪ್ರಕ್ರಿಯೆಯಲ್ಲಿ ಅವರು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಅವರಲ್ಲಿ ಪ್ರಮುಖರು:ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ ಚಂದ್ ಗೆಹ್ಲೋಟ್, ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು, ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ ರವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ, ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಕಾನೂನು, ಶಾಸನ ರಚನೆ, ಮತ್ತು ಪ್ರವಾಸೋದ್ಯಮ ಸಚಿವರಾದ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ಹಾಗೂ ಕರ್ನಾಟಕ ಸರ್ಕಾರದ ಹಿರಿಯ ಸಚಿವರು, ಶಾಸಕರು, ಅಧಿಕಾರಿಗಳು, ಜಲ ಸಂರಕ್ಷಣಾ ತಜ್ಞ ಮತ್ತು ಪರಿಸರವಾದಿ ಡಾ. ರಾಜೇಂದ್ರ ಸಿಂಗ್, ಡಾ. ಅಶೋಕ್ ದಳವಾಯಿ ಐ.ಎ.ಎಸ್, ಸಿ.ಇ.ಒ, ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ, ಗೌರವಾನ್ವಿತ ನಿವೃತ್ತ ಕುಲಪತಿಗಳಾದ ಪ್ರೊ.ಎಸ್.ಎ. ಪಾಟೀಲ್, ಯು.ಎ.ಎಸ್ ಧಾರವಾಡ ಮತ್ತು ನಿರ್ದೇಶಕರು, ಐ.ಸಿ.ಎ.ಆರ್, ಶ್ರೀ ರಾಮನಗೌಡ ನಾಡಗೌಡ, ಹಿರಿಯ ವಿಜ್ಞಾನಿ ಇಸ್ರೋ ಮತ್ತು ಬಾಹ್ಯಾಕಾಶ ನೌಕೆ ನಿರ್ದೇಶಕರು IRSAT-2BRI, ಡಾ. ವೈ.ಬಿ. ರಾಮಕೃಷ್ಣ, ಸರ್ಕಾರಿ ಜೈವಿಕ ಇಂಧನ ಕಾರ್ಯಕಾರಿ ಸಮಿತಿ ಸದಸ್ಯರು ಭಾರತ ಮತ್ತು ಶ್ರೀ ಅನಂತ ಹೆಗಡೆ, ಅಧ್ಯಕ್ಷರು ಜೈವಿಕ ವೈವಿಧ್ಯ ಮಂಡಳಿ G.O.K.
ಪ್ರತಿ ಶುಕ್ರವಾರ ಖಾದಿ ದಿನ: ವಿಶ್ವವಿದ್ಯಾಲಯದಲ್ಲಿ ಖಾದಿ ಉತ್ಪನ್ನವನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ಶುಕ್ರವಾರದಂದು ಖಾದಿ ದಿನವನ್ನು ಆಚರಿಸಲಾಗುವುದು. ಅಂದಿನ ದಿನ ವಿಶ್ವವಿದ್ಯಾಲಯದ ಎಲ್ಲಾ ಅಧಿಕಾರಿಗಳು ಬೋಧಕ/ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಖಾದಿ ವಸ್ತ್ರವನ್ನು ಧರಿಸುತ್ತಾರೆ.
ಸ್ವದೇಶಿ ದಿನ:
ಪ್ರತಿ ಶನಿವಾರದಂದು ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸ್ವಾವಲಂಬನೆಯನ್ನು ಉತ್ತೇಜಿಸುವ ಕ್ಷೇತ್ರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ದೇಸಿ ಮಳಿಗೆ:
ಕೆ.ವಿ.ಐ.ಸಿ., ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮತ್ತು ಎನ್.ಜಿ.ಒ.ಗಳ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ, ಈ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ವಿಶ್ವವಿದ್ಯಾಲಯದ ರೈತ ಭವನ ಸಂಕೀರ್ಣದಲ್ಲಿ ದೇಸಿ ಮಳಿಗೆಯನ್ನು ಪ್ರಾರಂಭಿಸಿದೆ.
***