ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು
ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು
ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು
ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ
ಸಹಾಯಕ ನಿರ್ದೇಶಕರು, ತರಬೇತಿ, ಪ್ರಕಟಣೆ ಮತ್ತು ,
ಮೇಲ್ವಿಚಾರಣೆ ಕೇಂದ್ರ ಕ.ರಾ.ಗ್ರಾ. ಮತ್ತು ಪಂ.ರಾಜ್
ವಿಶ್ವವಿದ್ಯಾಲಯ, ಗದಗ.
ಈ ಕೇಂದ್ರದ ಕೌಶಲ್ಯ ವಿಕಾಸ ಭವನವು 52,470 ಚದುರ ಅಡಿ ವಿಸ್ತಾರದಲ್ಲಿ ನಿರ್ಮಾಣವಾಗಿದೆ. ಎರಡು ಅಂತಸ್ತಿನ ಈ ಭವನದಲ್ಲಿ ಒಂಬತ್ತು ಭೋದನಾ ಕೊಠಡಿಗಳು ತರಬೇತಿಗಾಗಿ ಬರುವ ಶಿಬಿರಾರ್ಥಿಗಳಿಗೆ ಅಧ್ಯಯನ ಮಾಡಲು ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಹಾಗೂ ವಿವಿಧ ಸಮ್ಮೇಳನ, ಕಾರ್ಯಗಾರಗಳನ್ನು ಜರುಗಿಸಲು ವಿಶಾಲವಾದ
ಸಭಾಂಗಣ (Auditorium) ಹೊಂದಿದೆ. ಇಲ್ಲಿ ಒಟ್ಟಿಗೆ 500 ಶಿಬಿರಾರ್ಥಿಗಳಿಗೆ ತರಬೇತಿಯನ್ನು ಜರುಗಿಸಬಹುದಾಗಿದೆ. ಈ ಸುಸಜ್ಜಿತ ಕಟ್ಟಡವು 2021 ರಿಂದ ಕಾರ್ಯಾರಂಭಗೊಂಡಿದೆ.
ವಸತಿ ಸಹಿತ ತರಬೇತಿಯನ್ನು ಆಯೋಜಿಸಲು ವಿಶ್ವವಿದ್ಯಾಲಯದ ಅತಿಥಿ ಗೃಹ ಹಾಗೂ ವಿದ್ಯಾರ್ಥಿನಿಲಯಗಳನ್ನು ಉಪಯೋಗಿಸಿಕೊಂಡು ಕನಿಷ್ಠ 75 ಶಿಬಿರಾರ್ಥಿಗಳಂತೆ ನಿರಂತರವಾಗಿ ತರಬೇತಿಯನ್ನು ಆಯೋಜಿಸಲು ಉದ್ದೇಶಿಸಲಾಗಿರುತ್ತದೆ.
ಎಲ್ಲಾ ಬಗೆಯ ತರಬೇತಿ ಮತ್ತು ಪ್ರಕಟಣೆಯನ್ನು ಉತ್ತೇಜಿಸುವುದು, ಅಭಿವೃದ್ಧಿಪಡಿಸುವುದು ಮತ್ತು ಉತ್ತೇಜಿಸುವುದು.
ಎಲ್ಲಾ ಬಗೆಯ ಪಂಚಾಯತ್ ಸದಸ್ಯರು ಮತ್ತು ಅಧಿಕಾರಗಳಿಗೆ ತರಬೇತಿ ನೀಡುವುದು.
ಅಭಿವೃದ್ಧಿ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸುವುದು ಮತ್ತು ಕಿರು ಹೊತ್ತಿಗೆಗಳು, ಪುಸ್ತಕಗಳು, ನಿಯತಕಾಲಿಕೆಗಳು ಹಾಗೂ ಪಠ್ಯಪುಸ್ತಕಗಳನ್ನು ಪ್ರಕಟಿಸುವುದು.
ಕೌಶಲ್ಯ ಮತ್ತು ಉದ್ಯಮಶೀಲತಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧ್ಯಯನ ಮತ್ತು ತರಬೇತಿಗಳಿಗೆ ಉತ್ತೇಜನ ನೀಡುವುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಗೆ ಸಂಬಂಧಿಸಿದಂತೆ ಅಧ್ಯಯನ, ತರಬೇತಿಗಳನ್ನು ನೀಡಲು ಮತ್ತು ಪುಸ್ತಕಗಳನ್ನು ಪ್ರಕಟಿಸಲು ಉತ್ತೇಜನ ನೀಡುವುದು.
ಪರಿಸರ, ವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥಾಪನೆಗೆ ಸಂಬಂಧಿಸಿದ ಅಧ್ಯಯನಕ್ಕೆ ಉತ್ತೇಜನ ನೀಡುವುದು.
ಸಾಮಾಜಿಕ ವಿಜ್ಞಾನ ಮತ್ತು ಗ್ರಾಮೀಣ ಪುನಾರಚನೆಗೆ ಸಂಬಂಧಿಸಿದ ಅಧ್ಯಯನಕ್ಕೆ ಉತ್ತೇಜನ ನೀಡುವುದು.
ಕೃಷಿ ವ್ಯವಹಾರ ವ್ಯವಸ್ಥಾಪನೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥಾಪನೆಗೆ ಸಂಬಂಧಿಸಿದ ಅಧ್ಯಯನಕ್ಕೆ ಉತ್ತೇಜನ ನೀಡುವುದು.