Karnataka State Rural Development & Panchayat Raj University, Gadag

ಗ್ರಾಮೀಣ ಬೇರುಗಳು, ಜಾಗತಿಕ ಎತ್ತರಗಳು

ಶ್ರೀ ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಿಯಾಂಕ ಖರ್ಗೆ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು
ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು

ಪ್ರೊ. ಡಾ. ಸುರೇಶ ವಿ. ನಾಡಗೌಡರ

ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಶಾಂತ್ ಜೆ.ಸಿ.

ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಿಯಾಂಕ ಖರ್ಗೆ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು

ಪ್ರೊ. ಡಾ. ಸುರೇಶ್ ವಿ. ನಾಡಗೌಡರ್

ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಶಾಂತ್
ಜೆ.ಸಿ.

ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ವಿಶ್ವವಿದ್ಯಾಲಯದ ಗಾಂಧಿ ಸಬರಮತಿ ಆಶ್ರಮದ ಸಂಕ್ಷಿಪ್ತ ಪರಿಚಯ:

ಸಬರಮತಿ ಆಶ್ರಮವು ಅಹಮದಾಬಾದನಲ್ಲಿ ಮಹಾತ್ಮ ಗಾಂಧೀಜಿಯವರು ಸ್ಥಾಪಿಸಿದ ಆಶ್ರಮವಾಗಿದೆ. ಈ ಆಶ್ರಮವು ಸಬರಮತಿ ನದಿಯ ಪಶ್ಚಿಮ ತಟದಲ್ಲಿ ಇದೆ. ೧೯೧೫ ರಲ್ಲಿ ಅಹಮದಾಬಾದಿನ ಕೊಚ್ರಬ್ ಪ್ರದೇಶದಲ್ಲಿದ್ದ ಈ ಆಶ್ರಮವನ್ನು ೧೯೧೭ ರಲ್ಲಿ ಸಬರಮತಿ ನದಿಯ ದಂಡೆಗೆ ಸ್ಥಳಾಂತರಿಸಲಾಯಿತು. ಮಹಾತ್ಮ ಗಾಂಧೀಜಿಯವರು ಮತ್ತು ಅವರ ಪತ್ನಿ ಕಸ್ತೂರ ಬಾ ಗಾಂಧಿ ಮತ್ತು ವಿನೋಬಾ ಬಾವೆ ಸೇರಿದಂತೆ ಅನೇಕ ಅನುಯಾಯಿಗಳು ಒಟ್ಟು ಹನ್ನೆರಡು (೧೨) ವರ್ಷಗಳ ಕಾಲ ಈ ಆಶ್ರಮದಲ್ಲಿ ವಾಸವಿದ್ದರು. ಸಬರಮತಿ ಆಶ್ರಮವು ಗಾಂಧೀಜಿಯವರ ಸ್ವಾತಂತ್ರö್ಯದ ಎಲ್ಲಾ ಚಟುವಟಿಕೆಗಳ ಹಾಗೂ ಅವರ ಚಿಂತನೆ ಮತ್ತು ವಿಚಾರಗಳ ಅನುಷ್ಠಾನ ತಾಣವಾಗಿತ್ತು.

ಇಂತಹ ಐತಿಹಾಸಿಕ ಕಟ್ಟಡದ ಪ್ರತಿರೂಪವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಗಾಂಧೀಜಿಯವರ ತತ್ವ, ಚಿಂತನೆ ಮತ್ತು ಆದರ್ಶಗಳ ಆಧಾರಿತವಾದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವ ಹಾಗೂ ಅವುಗಳನ್ನು ಯುವ ಪೀಳಿಗೆಯಲ್ಲಿ ರೂಢಿಸುವ ಧ್ಯೇಯೋದ್ದೇಶಗಳೊಂದಿಗೆ, ಒಂದು ಪ್ರೇರಣಾ ಕೇಂದ್ರವಾಗಿ ವಿಶ್ವವಿದ್ಯಾಲಯವು ತನ್ನ ನೂತನ ಅವರಣದಲ್ಲಿ ನಿರ್ಮಾಣ ಮಾಡಿದೆ, ಈ ಸಬರಮತಿ ಆಶ್ರಮವು ನವೆಂಬರ್ ೧೧, ೨೦೨೦. ರಂದು ಲೋಕಾರ್ಪಣೆಗೊಂಡಿದೆ. ಆಶ್ರಮದ ಮೂಲಕ ರಾಷ್ಟಿçÃಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ನಡೆಸುವ ಉದ್ದೇಶವನ್ನು ಹೊಂದಲಾಗಿದೆ.

ಈ ಆಶ್ರಮವು, ೨೨.೯೧ ಮೀ. ಉದ್ದ ೧೫.೨೮ ಮೀ. ಅಗಲದ ವಿಸ್ತೀರ್ಣವನ್ನು ಹೊಂದಿದೆ. ಮಹಾತ್ಮ ಗಾಂಧೀಜಿಯವರ ಅಹಮದಾಬಾದ್‌ನ ಮೂಲ ಸಬರಮತಿ ಆಶ್ರಮದಲ್ಲಿರುವಂತೆ ಪ್ರಾರ್ಥನಾ ಮಂದಿರ, ಗಾಂಧಿ-ಕಸ್ತೂರಬಾ ಮಂದಿರ, ಚರಕ ಕೊಠಡಿ, ಅತಿಥಿಗೃಹ ಮತ್ತು ಗಾಂಧಿಜ್ಞಾನ ಮೂರ್ತಿಯನ್ನು ಈ ಆಶ್ರಮವು ಒಳಗೊಂಡಿದೆ.

Responsive Table
ಕ್ರ.ಸಂ. ಹೆಸರು ಪದನಾಮ
1 ಪ್ರೊ. ಸುರೇಶ ವಿ.ನಾಡಗೌಡರ ಕುಲಪತಿಗಳು,(ಪ್ರ) ಮತ್ತು ರಿಜಿಸ್ಟ್ರಾರ್ ಕೆ.ಎಸ್.ಆರ್.ಡಿ.ಪಿ.ಆರ್.ವಿ.ವಿ, ಗದಗ
ಅಧ್ಯಕ್ಷರು
2 ಡಬ್ಲೂ. ಪಿ. ಕೃಷ್ಣ ಅಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು
ಸದಸ್ಯರು
3 ಡಾ. ಜೀವನ ಕುಮಾರ ಗೌರವ ಪ್ರಾಧ್ಯಾಪಕರು, ಕೆ.ಎಸ್.ಆರ್.ಡಿ.ಪಿ.ಆರ್.ವಿ.ವಿ, ಗದಗ
ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು ವಿ.ವಿ, ಬೆಂಗಳೂರು
ಸದಸ್ಯರು
4 ಡಾ. ಮೀನಾ ದೇಶಪಾಂಡೆ ವಿಶ್ರಾAತ ಪ್ರಾಧ್ಯಾಪಕರು, ರಾಜ್ಯಶಾಸ್ತç ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
ಸದಸ್ಯರು
5 ಶ್ರೀ ವಿ.ಎಸ್. ತಿಪ್ಪನಗೌಡ ಉಪಾಧ್ಯಾಕ್ಷರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ,ಕುಮಾರ ಪಾರ್ಕ್ ಪೂರ್ವ, ಬೆಂಗಳೂರು
ಸದಸ್ಯರು
6 ಪ್ರೊ. ಶಿವಾನಂದ ಶೆಟ್ಟರ್ ಪ್ರಾಧ್ಯಾಪಕರು, ಗಾಂಧಿ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಸದಸ್ಯರು
7 ಪ್ರೊ. ಜಿ.ಬಿ. ಶಿವರಾಜು ಉಪಾಧ್ಯಕ್ಷರು, ಗಾಂಧಿ ಭವನ, ಬೆಂಗಳೂರು
ಸದಸ್ಯರು
8 ಶ್ರೀ ಪ್ರಕಾಶ ಎಸ್. ಮಾಚೇನಹಳ್ಳಿ ಉಪನ್ಯಾಸಕರು, ಎಂ.ಎ(ಆರ್,ಡಿ.ಪಿ.ಆರ್) ಕಾರ್ಯಕ್ರಮ,
ಕ.ರಾ.ಗ್ರಾ ಮತ್ತು ಪಂ.ರಾ. ವಿಶ್ವವಿದ್ಯಾಲಯ, ಗದಗ

ಆಶ್ರಮದ ಧ್ಯೇಯೋದ್ದೇಶಗಳು:

ಕೃಷಿ, ಪಶುಸಂಗೋಪನೆ, ಖಾದಿ ಉದ್ಯಮ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬAಧಿಸಿದ ರಚಾನಾತ್ಮಕ ಚಟುವಟಿಕೆಗಳ ಪ್ರಯೋಗ.

ಗಾಂಧೀಜಿಯವರ ‘ನಯೀ ತಾಲೀಮ್’ ಪರಿಕಲ್ಪನೆಯನ್ನು ಆಧರಿಸಿ ಚಟುವಟಿಕೆಗಳನ್ನು ಕೈಗೊಳ್ಳುವುದು.

ಸ್ವಾವಲಂಬನಾ ದುಡಿಮೆ, ಕೃಷಿ ಮತ್ತು ಸಾಕ್ಷರತೆಯನ್ನು ಕೇಂದ್ರೀಕರಿಸುವ ಒಂದು ಮಾದರಿ ಕೇಂದ್ರವನ್ನಾಗಿಸುವುದು.

ಸತ್ಯ ಮತ್ತು ಅಹಿಂಸೆಯ ಹೊಸ ಸಾಮಾಜಿಕ ರಚನೆಯನ್ನು ಬೆಳೆಸುವುದು.

ಗ್ರಾಮೀಣಾಭಿವೃದ್ಧಿಗೆ ಸೂಕ್ತವಾದ ಉಪಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು.

ಗಾಂಧೀಜಯವರ ಜೀವನ ದರ್ಶನ, ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜಿಸುವುದು.

ಆಶ್ರಮದ ಕಾರ್ಯ ಚಟಿವಟಿಕೆಗಳು:

ಗಾಂಧಿ ü ಚಿಂತನ - ಮಂತನ ಮತ್ತು ಸತ್ಸಂಗ ಕಾರ್ಯಕ್ರಮ

ಗಾಂಧಿ ಚಿಂತನ - ಮಂತನ ಮತ್ತು ಸತ್ಸಂಗ ಕಾರ್ಯಕ್ರಮವನ್ನು ಪ್ರತಿ ತಿಂಗಳು ೧೧th ರಂದು ಸಬರಮತಿ ಆಶ್ರಮದಲ್ಲಿ ನಡೆಸಲಾಗುತ್ತದೆ. ಇಲ್ಲಿಯವರೆಗೆ, ೫೦ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಈ ಉಪಕ್ರಮದ ಪ್ರಾಥಮಿಕ ಉದ್ದೇಶ ಗಾಂಧಿಯವರ ತತ್ವಶಾಸ್ತ್ರವನ್ನು ಹರಡುವುದು ಮತ್ತು ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಗಾಂಧಿಯವರ ಮೌಲ್ಯಗಳನ್ನು ಬೆಳೆಸುವುದು.

  • ಖಾದಿ ಬಳಿಕೆಯ ಉತ್ತೇಜನ ಮತ್ತು ಮಾರಟ:

ಸಬರಮತಿ ಆಶ್ರಮದಲ್ಲಿ ಫೆಬ್ರವರಿ ೨೦೨೧ ರಿಂದ ಖಾದಿ ಪ್ರಚಾರ, ಖಾದಿ ವಸ್ತçಗಳ ಬಳಕೆಯ ಉತ್ತೇಜನ ಮತ್ತು ಮಾರಾಟ ಕುರಿತಾದ ಕಾರ್ಯಚಟುವಟಿಕೆಗೆ ಚಾಲನೆ ನೀಡಲಾಯಿತು. ಆಶ್ರಮಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಈ ಕುರಿತು ಮಾಹಿತಿಯನ್ನು ತಲುಪಿಸುವುದರೊಂದಿಗೆ ಕಳೆದ ಎರಡು ವರ್ಷಗಳಿಂದ ಆಶ್ರದಲ್ಲಿ ಖಾದಿ ಪರಿಕರಗಳನ್ನು ಮಾರಟ ಮಾಡಲಾಗುತ್ತಿದೆ. ಖಾದಿ ವಸ್ತುಗಳ ಮಾರಾಟದಿಂದ ಬಂದ ೨೦ ಸಾವಿರಕ್ಕೂ ಅಧಿಕ ಆದಾಯವನ್ನು ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ನೀಡಲಾಗಿದೆ. ಡಿಫ್ಲೋಮಾ

ಕೋರ್ಸ್- ಗಾಂಧಿ ವಿಚಾರಗಳು ಮತ್ತು ಕಾರ್ಯಗಳು:

ಗಾಂಧಿ ವಿಚಾರಗಳು ಮತ್ತು ಕಾರ್ಯಗಳು ಎಂಬ ವಿಷಯದ ಕುರಿತಂತೆ ೨೦೨೧ -೨೨ರ ಶೈಕ್ಷಣಿಕ ಸಾಲಿನಲ್ಲಿ ಒಂದು ವರ್ಷದ ಡಿಫ್ಲೋಮಾ ಕೋರ್ಸ್ನ್ನು ಆಶ್ರಮದಲ್ಲಿ ಪರಿಚಯಿಸಲಾಗಿದೆ. ಪಿಯುಸಿ ಅರ್ಹತೆಯನ್ನು ಹೊಂದಿದ ಯಾವುದೇ ಆಸಕ್ತ ಅಭ್ಯಾರ್ಥಿಗಳು ಈ ಕೋರ್ಸ್ನ್ನು ಅಧ್ಯಯನ ಮಾಡಬಹುದು. ಗಾಂಧೀಜಿಯವರ ಚಿಂತನೆ, ವಿಚಾರಗಳು ಮತ್ತು ತತ್ವ ಸಿದ್ಧಾಂತಗಳನ್ನು ಕೌಶಲಾಧಾರಿತವಾಗಿ ಬೋಧಿಸುವ ಉದ್ದೇಶವನ್ನು ಈ ಡಿಫ್ಲೋಮಾ ಕೋರ್ಸ್ ಹೊಂದಿದೆ ಪ್ರಸ್ತಕ ಸಾಲಿನಲ್ಲಿ ೩೦ ವಿದ್ಯಾರ್ಥಿಗಳು ಅಧ್ಯಯನವನ್ನು ನಡೆಸುತ್ತಿದ್ದಾರೆ.

ಚರಕದಿಂದ ನೂಲು ತೆಗೆಯುವ ತರಬೇತಿ:

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡಕ್ಕೆ ಚರಕದಿಂದ ನೂಲು ತೆಗೆಯುವ ತರಬೇತಿ ಕಾರ್ಯಕ್ರಮವನ್ನು ಫೆಬ್ರುವರಿ ೦೫, ೨೦೨೧ ರಂದು ಚಾಲನೆ ನೀಡಲಾಯಿತು. ಗದಗ-ಬೆಟಗೇರಿ ನಗರದ ಶ್ರೀ ಮಾರುತಿ ಕೈಮಗ್ಗ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ಕಿನ್ನಾಳ ಅವರು ಹಾಗೂ ಆಶ್ರಮದ ಪ್ರಶಿಕ್ಷಣಾರ್ಥಿ ಈ ತರಬೇತಿಯನ್ನು ನೀಡುತ್ತಾರೆ. ಪ್ರಸ್ತುತ ಆಶ್ರಮದಲ್ಲಿ ೨ ಪೆಟ್ಟೆಗೆ ಚರಕಗಳಿವೆ, ಕರಕುಶಲತೆಗೆ ಸಂಬAಧಿಸಿದAತೆ ವಿಶ್ವವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಘಟಕವಿದ್ದು, ಈ ಘಟಕ ಮುಖೇನ ಆಸಕ್ತ ವಿದ್ಯಾರ್ಥಿಗಳಿಗೆ ನಯೀತಾಲಿಮ್ ಕಾರ್ಯಕ್ರಮದ ಭಾಗವಾಗಿ ತರಬೇತಿಯನ್ನು ನೀಡಲಾಗುತ್ತಿದೆ.

Sಸೇವಾ ನಿಧಿ:

“ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ” ಎಂಬ ಧ್ಯೇಯವ್ಯಾಕ್ಯದಡಿಯಲ್ಲಿ ದೀನ ದಲಿತರ ಸೇವೆಯೇ ಪರಮ ಆರಾಧನೆ ಎಂಬ ದೃಷ್ಟಿಕೋನದ ಅನುಗುಣವಾಗಿ ಸಾಮಾಜಿಕ ಸೇವೆಗಾಗಿ ಅಕ್ಟೋಬರ್, ೦೨, ೨೦೨೧ ರಂದು ಸೇವಾ ನಿಧಿಯನ್ನು ಸ್ಥಾಪಿಸಲಾಗಿದೆ. ಈ ನಿಧಿಯಲ್ಲಿ ಸಂಗ್ರಹವಾಗುವ ಧನವನ್ನು ಸಾಮಾಜಿಕ ಸೇವೆಗೆ ಬಳಸಲಾಗುತ್ತಿದೆ.

ನಿತ್ಯ ಭಜನೆ:

ಮಹಾತ್ಮ ಗಾಂಧೀಜಿಯವರ ನಿತ್ಯ ಭಜನೆಯ ಪ್ರೇರಣಾ ದೃಷ್ಟಿಕೋನದಲ್ಲಿ ನಿತ್ಯ ಭಜನೆ ಕಾರ್ಯಕ್ರಮಕ್ಕೆ ಜುಲೈ ೦೩. ೨೦೨೨ ರಂದು ಚಾಲನೆ ನೀಡಲಾಗಿದೆ. ಆಶ್ರಮದಲ್ಲಿ ದಿನನಿತ್ಯ ಬೆಳಗ್ಗೆ ೯.೩೦ ರಿಂದ ೯.೪೫ ರವರಿಗೆ ಪ್ರಾರ್ಥನೆ ಮತ್ತು ಧ್ಯಾನವನ್ನು ನಡೆಸಲಾಗುತ್ತಿದೆ.

ಶ್ರಮಕ್ಕೆ ಒಟ್ಟು ಭೇಟಿ ನೀಡಿದವರ ವಿವರ:

ಸಬರಮತಿ ಆಶ್ರಮದ ಸಂದರ್ಶನಕ್ಕೆ ಡಿಸೆಂಬರ್ ೦೧. ೨೦೨೦ ರಿಂದ ಚಾಲನೆ ನೀಡಲಾಗಿದೆ. ಆಶ್ರಮದ ವೀಕ್ಷಣೆಗೆ ಗದಗ ಜಿಲ್ಲೆ ಸೇರಿದಂತೆ ನಾಡಿನ ಎಲ್ಲಾ ಜಿಲ್ಲೆಗಳಿಂದ ಹಾಗೂ ದೇಶದ ಹಲವು ಭಾಗಗಳಿಂದ ಸಾರ್ವಜನಿಕರು ಹಾಗೂ ಪ್ರಮುಖರು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಇಲ್ಲೆಯವರೆಗೆ (ಡಿ.೧೧, ೨೦೨೦ ರಿಂದ ಡಿ.೩೧. ೩೧, ೨೦೨೪ ರವರೆಗೆ) ೩೯೬೭೨ ಜನರು ಸಬರಮತಿ ಆಶ್ರಮಕ್ಕೆ ಭೇಟಿಯನ್ನು ನೀಡಿರುತ್ತಾರೆ. s

ಶ್ರೀ ಪ್ರಕಾಶ್ ಎಸ್.ಮಾಚೇನಹಳ್ಳಿ.

ಕ.ರಾ.ಗ್ರಾ ಮತ್ತು ಪಂ.ರಾ. ವಿಶ್ವವಿದ್ಯಾಲಯ, ಗದಗ

ಸಬರಮತಿ ಆಶ್ರಮ, ಏSಖಆPಖU, ಗದಗ