Karnataka State Rural Development & Panchayat Raj University, Gadag

ಗ್ರಾಮೀಣ ಬೇರುಗಳು, ಜಾಗತಿಕ ಎತ್ತರಗಳು

ಶ್ರೀ ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಿಯಾಂಕ ಖರ್ಗೆ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು
ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು

ಪ್ರೊ. ಡಾ. ಸುರೇಶ ವಿ. ನಾಡಗೌಡರ

ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಶಾಂತ್ ಜೆ.ಸಿ.

ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಥಾವರ್ ಚಂದ್ ಗೆಹ್ಲೋಟ್

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ಕುಲಾಧಿಪತಿಗಳು, ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಿಯಾಂಕ ಖರ್ಗೆ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಸಚಿವರು, ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳು

ಪ್ರೊ. ಡಾ. ಸುರೇಶ್ ವಿ. ನಾಡಗೌಡರ್

ಕುಲಸಚಿವರು ಮತ್ತು ಕುಲಪತಿಗಳು (ಪ್ರಭಾರ),
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಶ್ರೀ ಪ್ರಶಾಂತ್
ಜೆ.ಸಿ.

ಹಣಕಾಸು ಅಧಿಕಾರಿಗಳು,
ಕ.ರಾ.ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ

ಸ್ವಗ್ರಾಮ ಫೆಲೋಶಿಪ್

ಗ್ರಾಮೀಣ ಬದಲಾವಣೆ-ಸಾಧಕರಿಗೆ ಶಕ್ತಿಯುಪದಾನ

ನಮ್ಮ ಗ್ರಾಮ ನಮ್ಮ ಹೆಮ್ಮೆ
"ಬನ್ನಿ ಸ್ವಾವಲಂಬೀ ಗ್ರಾಮ ಸ್ವರಾಜ್ಯದ ಮೂಲಕ ಆತ್ಮನಿರ್ಭರ ಭಾರತಕ್ಕಾಗಿ
ನವನಿರ್ಮಾಣದ ಹೊಸಮನ್ವಂತರಕ್ಕೆ ಸಂಕಲ್ಪ ಮಾಡೋಣ"

ವಿವರಣೆ

ಸ್ವಾತಂತ್ರದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ಗ್ರಾಮ ಸ್ವರಾಜ್ಯದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಸ್ವಾವಲಂಬಿ ಗ್ರಾಮಗಳು ಆದರ್ಶಪ್ರಾಯವಾಗಿವೆ. ಹಿಂದಿನಿಂದಲೂ ಗ್ರಾಮಗಳಿಂದಲೇ ಸ್ವರಾಜ್ಯ, ಸನ್ನಡತೆ, ಸಚ್ಚಾರಿತ್ರ,ಸಂಸ್ಕಾರಯುತ ನಾಗರೀಕರು ಹುಟ್ಟುತ್ತಿದ್ದಾರೆ.
ಭಾರತೀಯ ಗ್ರಾಮಗಳ ಸಂಸ್ಕೃತಿಯ ಪರಿಸ್ಥಿತಿ ಸ್ವತಂತ್ರ ಭಾರತದಲ್ಲಿ ಅಧೋಗತಿಯೆಡೆಗೆ ಪಯಣಿಸುತ್ತಿದೆ. ಭಾರತದಲ್ಲಿ ಒಂದುವರೆ ಶತಮಾನಗಳಿಂದ ಗ್ರಾಮೋತ್ಥಾನದ ಕುರಿತು ಆಗಾಧ ಚಿಂತನೆಗಳು ಮತ್ತು ಪ್ರಯೋಗಗಳು ನಿರಂತರವಾಗಿ ನಡದೇ ಇವೆ. ಆದರೂ ಇಂದು ಗ್ರಾಮೋತ್ಥಾನ ಮರಿಚಿಕೆಯಾಗಿಯೇ ಉಳಿದಿದೆ. ಹಾಗೆಂದ ಮಾತ್ರಕ್ಕೆ ಗ್ರಾಮೋತ್ಥಾನ ಅವಗಣನೆಗೆ ಒಳಪಟ್ಟಿದೆಯೆಂದಲ್ಲ. ಕೆಲವರು ಶಿಕ್ಷಣ, ಆರೋಗ್ಯ, ಕೃಷಿಯನ್ನು ಕೇಂದ್ರವಾಗಿರಿಸಿಕೊಂಡು ಗ್ರಾಮೋತ್ಥಾನಕ್ಕಾಗಿ ಸಾಕಷ್ಟು ದುಡಿದದ್ದೂ ಇದೆ. ಸರ್ವೋದಯದ ಮಾದರಿಗಳೂ ನಮ್ಮ ಮುಂದಿವೆ. ಸರ್ಕಾರಗಳು ಗ್ರಾಮಾಭ್ಯುದಯದ ಸರಿಯಾದ ಮಾದರಿಗಳಿಗಾಗಿ ಹುಡುಕಾಡುತ್ತಲೇ ಇವೆ. ಇವೆಲ್ಲದರ ನಡುವೆ ಗ್ರಾಮಗಳು ಮತ್ತು ಗ್ರಾಮಸ್ಥರು ಸರ್ವತೋಮುಖವಾಗಿ ಹಿನ್ನೆಲೆಗೆ ಸರಿಯುತ್ತಿರುವುದು ಅಷ್ಟೇ ಸತ್ಯ. ಗ್ರಾಮದ ಸ್ವಭಾವ ಮತ್ತು ಅಂತಸತ್ವವನ್ನು ಗುರುತಿಸದೆ, ಪಶ್ಚಿಮದಿಂದ ಎರವಲುಪಡೆದ ಪರಕೀಯ ಮತ್ತು ಭೌತಿಕ ಅಭಿವೃದ್ಧಿಯ ಮಾದರಿಗಳ ಕಡೆಗೆ ಒತ್ತಾಯಪೂರ್ವಕವಾಗಿ ಗ್ರಾಮಗಳನ್ನು ದೂಡಿ, ಗ್ರಾಮ ಸ್ವರಾಜ್ಯವೆಂದರೆ ಪರಾವಲಂಬನೆ ಎನ್ನುವಂತೆ ಮಾಡಿವೆ. ಗ್ರಾಮವೊಂದರ ಅಂತಃಸತ್ವದ ಆಧಾರದ ಮೇಲೆ ಗ್ರಾಮದ ಜನರೇ ನಿರ್ಣಯಿಸಿ ಕಟ್ಟಬೇಕಾಗಿರುವ ಸ್ವಾವಲಂಬೀ ಗ್ರಾಮವನ್ನು, ಪ್ರಭುತ್ವದ ಕೆಲವು ಕಚೇರಿಗಳ ಕೆಲಸವನ್ನಾಗಿ ಪರಿರ್ವತಿಸಲಾಗಿದೆ.
ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಆತ್ಮನಿರ್ಭರ ಭಾರತದ ಕನಸನ್ನು ಕಾಣಬೇಕೆಂದರೆ, ಅದು ಸ್ವಾಲವಂಬೀ ಗ್ರಾಮದ ಕಡೆಗೆ ಹೆಜ್ಜೆ ಹಾಕುವುದೆಂದೇ ಅರ್ಥ. ಈ ನಡೆ ಹೊಸತನದ ವಿರೋಧಿಯಲ್ಲ, ಬದಲಿಗೆ ಹೊಸಚಿಗುರು ಹಳೆಬೇರು ಎನ್ನುವ ವಾಕ್ಯದಂತೆ. ಆತ್ಮನಿರ್ಭರ ಭಾರತವೆಂದರೇ, ಸಮಗ್ರವಿಕಾಸದ ಕಲ್ಪನೆಯಡಿ, ಗ್ರಾಮಗಳ ಸ್ವಭಾವಗಳನ್ನು ಆಧರಿಸಿ, ಗ್ರಾಮಸ್ಥರೇ ನಿರ್ಣಯಿಸಿ ಕ್ರಿಯಾನ್ವಯಗೊಳಿಸುವ ಅಭ್ಯುತ್ಥಾನ ಪಥ. ಇಂತಹ ಒಂದು ಮಾದರಿಯನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ, ಗ್ರಾಮ ವಿಕಾಸದ ಮಾದರಿಗಳನ್ನು ರೂಪಿಸಲು ಯೂತ್ ಫಾರ್ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಪ್ರಜ್ಞಾಪ್ರವಾಹ ಮತ್ತು ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್ ಅಧ್ಯಯನ ಪೀಠದ ಸಹಯೋಗದೊಂದಿಗೆ ಸ್ವಗ್ರಾಮ ಫೆಲೋಷಿಪ್ ಅನ್ನು ಆರಂಭಿಸಿದೆ.

ವಿಭಾಗ ಸಂಪರ್ಕ

ಶ್ರೀ ಲಿಂಗರಾಜ ನಿಡುವಾಣಿ

ಸಂಯೋಜಕರು – ಸ್ವಗಾಮ್ಯ ಫೆಲೋಶಿಪ್

phone : 8050501377
ಶ್ರೀ. ಅಭಿಷೇಕ್ ಎಚ್. ಇ.

ಸಂಯೋಜಕರು – ಸ್ವಗಾಮ್ಯ ಫೆಲೋಶಿಪ್

phone : 9206808889