ವಿಶ್ವ ಚೇತನಾ ಸ್ವಾಮಿ ವಿವೇಕಾನಂದ ಅವರ 39.5 ಅಡಿ ಎತ್ತರದ ಜಗತ್ತಿನ ಅತ್ಯುಚ್ಚ ಪ್ರತಿಮೆ ವಿಶ್ವವಿದ್ಯಾಲಯದ 'ಗ್ರಾಮ ಗಂಗೋತ್ರಿ' ನಾಗವಿ ಸಂಪೀಟದಲ್ಲಿ ಅನಾವರಣಗೊಂಡಿದೆ. ಈ ಪ್ರತಿಮೆ ಸ್ವಾಮಿ ವಿವೇಕಾನಂದ ಅವರ 39.5 ವರ್ಷದ ಜೀವನವನ್ನು ಪ್ರತಿಬಿಂಬಿಸುತ್ತದೆ. 1893ರಲ್ಲಿ ಚಿಕಾಗೋದಲ್ಲಿ ನೀಡಿದ ಐತಿಹಾಸಿಕ ಭಾಷಣದ ಸ್ಮರಣಾರ್ಥವಾಗಿ, 2024ರ ಸೆಪ್ಟೆಂಬರ್ 11 ರಂದು ಈ ಪ್ರತಿಮೆಯು ಅನಾವರಣಗೊಂಡಿತು. ಕೊಲ್ಕತ್ತಾದ ಸ್ವಾಮಿ ವಿವೇಕಾನಂದ ರಾಮಕೃಷ್ಣ ಮಿಷನ್ ವತಿಯಿಂದ ಒದಗಿಸಲಾದ ಕಂಚಿನ ಈ ಪ್ರತಿಮೆ, ಸ್ವಾಮಿ ನಿರ್ಭಯಾನಂದಜಿ, ಡಾ. ಹೆಚ್.ಕೆ. ಪಾಟೀಲ್, ಹಾಗೂ ಶ್ರೀ ಡಿ.ಆರ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಸಾರ್ವಜನಿಕ ಮತ್ತು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಪೂರ್ಣಗೊಂಡಿತು. ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಅವರ ಆದರ್ಶಗಳನ್ನು ಸ್ಮರಿಸಿಸುವ ಶಾಶ್ವತ ಪ್ರೇರಣಾ ಸ್ವರೂಪವಾಗಿ ಈ ಪ್ರತಿಮೆ ಪಲ್ಲಟಗೊಳ್ಳುತ್ತದೆ.