English
ನಮ್ಮ ಬಗ್ಗೆ

ವಿಶ್ವವಿದ್ಯಾಲಯದ ಬಗ್ಗೆ

ದೃಷ್ಟಿ

ವಿಶ್ವವಿದ್ಯಾಲಯದ ದೃಷ್ಟಿಯು ಸುಸ್ಥಿರ ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮೀಣ ಜನತೆಯ ಜೀವನ ಗುಣಮಟ್ಟವನ್ನು ವಿಶಾಲ ಹರವಿನ ಸುಧಾರಣೆಯನ್ನು ಖಚಿತಪಡಿಸುವ ಗ್ರಾಮೀಣಾಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಹ ಸಮರ್ಪಣಾ ಮನೋಭಾವದ, ಬದ್ಧತೆಯುಳ್ಳ, ಮಾನವ ಸಂಪನ್ಮೂಲವನ್ನು ಸೃಜಿಸುವ ಮೂಲಕ ಗ್ರಾಮೀಣ ಸಮಾಜವನ್ನು ಉತ್ಕೃಷ್ಟ ಕೇಂದ್ರವಾಗಿಸಲು ಕಾರ್ಯಮಗ್ನವಾಗುವುದು.


ಗುರಿ

ವಿಶ್ವವಿದ್ಯಾಲಯದ ಗುರಿಯು ಬಡತನವನ್ನು ಕಡಿಮೆ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜನರು ತಮ್ಮದೇ ಆದ ಕ್ಷೇಮಾಭಿವೃದ್ಧಿ, ಆರ್ಥಿಕ ಮತ್ತು ಸಾಮಾಜೋ - ರಾಜಕೀಯ ಪ್ರಗತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಪಂಚಾಯತ್ ರಾಜ್ ಸಂಸ್ಥೆಗಳ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಅಂತರ್ಗತ ಬೆಳವಣಿಗೆಗೆ ಕಾರಣವಾಗುವ ಆರೋಗ್ಯ, ಶಿಕ್ಷಣ ಮತ್ತು ಕೌಶಲಾಭಿವೃದ್ಧಿಗಳಲ್ಲಿ ಅಗತ್ಯ ಸೇವೆಗಳನ್ನು ನೀಡಲು ಅವಕಾಶವೀಯುವ ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ವಿವಿಧ ಪಾಲುದಾರರಿಗೆ ಶಿಕ್ಷಣ ಮತ್ತು ತರಬೇತಿ ನೀಡುವುದು.


ವಿಶ್ವವಿದ್ಯಾಲಯದ ಸ್ಥಾಪನೆ ಹಿನ್ನೆಲೆ


ವಿಶ್ವವಿದ್ಯಾಲಯದ ವಿಕಸನ

ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಅಧ್ಯಯನ ಹಾಗೂ ಸಂಶೋಧನೆಗಾಗಿ ಒಂದು ಪ್ರತ್ಯೇಕ ’ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆನ್ನುವುದು, ಕ್ರಿಯಾಶೀಲರು ಹಾಗೂ ಅಂದಿನ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಎಚ್. ಕೆ. ಪಾಟೀಲ್ ರವರ ಪರಿಕಲ್ಪನೆಯಾಗಿತ್ತು. ಅದರಂತೆ, ಮಾನ್ಯ ಮುಖ್ಯಮಂತ್ರಿಗಳು 2013-14ರ ಆಯವ್ಯಯ ಭಾಷಣದಲ್ಲಿ, ವಿಧಾನ ಸಭೆಯ ಎರಡೂ ಸದನಗಳಲ್ಲಿ ಅನುಮೋದನೆ ಪಡೆಯಲು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವನೆಯನ್ನು ಮಂಡಿಸಿದರು. ರಾಜ್ಯ ಸರ್ಕಾರವು, ವಿಶ್ವವಿದ್ಯಾಲಯ ಸ್ಥಾಪನೆಯ ವಿಷಯದ ಬಗ್ಗೆ ಅಧ್ಯಯನ ನಡೆಸಿ ವರದಿಮಾಡಲು ಶ್ರೀ ಎಸ್. ವಿ. ರಂಗನಾಥ್ ಭಾ.ಆ.ಸೇ, ನಿವೃತ್ತ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಇವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಕರ್ನಾಟಕ ಗ್ರಾಮೀಣ ಜನತೆಯ ಜೀವನ ಮಟ್ಟ ಸುಧಾರಣೆಗೆ ಗ್ರಾಮೀಣ ವಿಶ್ವವಿದ್ಯಾಲಯ ಯಾವ ರೀತಿ ಸೇವೆ ಒದಗಿಸಬಹುದು ಎನ್ನುವ ಹಲವಾರು ವಿಷಯಗಳ ಬಗ್ಗೆ ಸಮಿತಿಯು ಚರ್ಚೆ ನಡೆಸಿತು. ಗ್ರಾಮೀಣ ಜನತೆ ಸಾಮಾನ್ಯವಾಗಿ ಎದುರಿಸುತ್ತಿರುವ ಅಪೌಷ್ಠಿಕತೆ, ಹಸಿವು, ಬಡತನ ಮತ್ತು ನಿರುದ್ಯೋಗ, ವರ್ಗ ಮತ್ತು ಲಿಂಗ ತಾರತಮ್ಯತೆ, ಜೀವನೋಪಾಯ ಮತ್ತು ಭೂಮಿ ಕಳೆದುಕೊಳ್ಳುವಿಕೆ ಮುಂತಾದ ವಿಷಯಗಳು ಪ್ರಮುಖವಾಗಿರುತ್ತದೆ. ನಗರ ಪ್ರದೇಶದ ಉದ್ದಿಮೆಗಳಲ್ಲಿ ಮತ್ತು ಸೇವಾವಲಯದಲ್ಲಿ ಹಲವಾರು ಉದ್ಯೋಗ ಅವಕಾಶಗಳಿದ್ದರೂ ಗ್ರಾಮೀಣ ಯುವಕರು ನಿರುದ್ಯೋಗಿಗಳಾಗಿರುತ್ತಾರೆ. ಇದಕ್ಕೆ ಪ್ರಮುಖ ಕಾರಣ ಆಯಾ ಕ್ಷೇತ್ರಕ್ಕೆ ಬೇಕಾಗುವ ಕೌಶಲ್ಯಾಭಿವೃದ್ಧಿ ತರಬೇತಿ ಇಲ್ಲದೇ ಇರುವುದಾಗಿದೆ. ಇಂತಹ ಸಮಸ್ಯೆಗಳಿಗೆ ಗ್ರಾಮೀಣ ವಿಶ್ವವಿದ್ಯಾಲಯದಲ್ಲಿ ಪ್ರಸ್ತಾಪಿಸಲಾದ ಕೌಶಲ್ಯಾಭಿವೃದ್ಧಿ ತರಬೇತಿ ಶಾಲೆಯು ಉತ್ತರಿಸಲಿದೆ. ಸಮಿತಿಯು ಹಲವಾರು ಸಂಸ್ಥೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಪ್ರಮುಖವಾಗಿ ಇನಿಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ (IRMA) ಆನಂದ, ನ್ಯಾಷನಲ್ ಇನಿಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ಮೆಂಟ್ (NIRD) ಹೈದರಾಬಾದ್, ಗಾಂಧಿಗ್ರಾಮ ಮಧುರೈ, ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಅಹಮದಾಬಾದ್, ಟಾಟಾ ಇನಿಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ (TISS) ಮುಂಬೈ ಇತ್ಯಾದಿ. ಗ್ರಾಮೀಣ ಪ್ರದೇಶದ ಹಲವಾರು ಸಮಸ್ಯೆಗಳನ್ನು ಪರಿಹರಿಸುವ, ಸಮರ್ಪಣಾ ಭಾವದ, ಬದ್ಧತೆಯುಳ್ಳ ಜನಶಕ್ತಿಯನ್ನು ರೂಪಿಸುವ ಕಾರ್ಯವನ್ನು ಸದರಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಮೂಲಕ ಸಾಧಿಸಬಹುದಾಗಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿತು.


ವಿಶ್ವವಿದ್ಯಾಲಯದ ಸ್ಥಾಪನೆ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಅಧಿನಿಯಮ, 2016 ರನ್ವಯ ವಿಶ್ವವಿದ್ಯಾಲಯ ಸ್ಥಾಪನೆಗೆ ಅಧಿಸೂಚಿಸಲಾಯಿತು. ಬೋಧನೆ, ತರಬೇತಿ ಮತ್ತು ಅಧ್ಯಯನದ ಮೂಲಕ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಂಸ್ಥೆಗಳ ಸುಸ್ಥಿರ ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಈ ಅಧಿನಿಯಮವು ಸ್ಥಳೀಯ ಸ್ವಯಂ ಸಂಸ್ಥೆಗಳ ಬಲಪಡಿಸುವಿಕೆ ಮತ್ತು ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳ ಅಭ್ಯಾಸ ಮತ್ತು ಅಧ್ಯಯನ ಮಾಡುವುದರ ಮೂಲಕ ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಕರ್ನಾಟಕ ಗ್ರಾಮೀಣ ಪ್ರದೇಶವಾದ ಗದಗ ಇದರ ಕೇಂದ್ರ ಸ್ಥಾನವಾಗಿದೆ. ಬೆಂಗಳೂರಿನಲ್ಲಿ ಪ್ರಾದೇಶಿಕ ಕಛೇರಿ ಹೊಂದಲಾಗಿದ್ದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಂದಿನ ಸಚಿವರಾದ ಸನ್ಮಾನ್ಯ ಶ್ರೀ ಹೆಚ್, ಕೆ. ಪಾಟೀಲ್ ರವರ ದೂರ ದೃಷ್ಟಿಯ ಮಾರ್ಗದರ್ಶನ ಹಾಗೂ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಬೆಂಬಲದಿಂದ ರೂಪಗಳ್ಳುತ್ತಿದೆ. ಪ್ರೊ. ಡಾ. ಬಿ. ತಿಮ್ಮೇಗೌಡ ಇವರು ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಡಾ. ಪ್ರೊ. ಸುರೇಶ. ವಿ. ನಾಡಗೌಡರ ಇವರು ಕುಲಸಚಿವರಾಗಿ ಹಾಗೂ ಶ್ರೀ ಜೆ. ಸಿ. ಪ್ರಶಾಂತ. ಜೆ. ಸಿ. ಇವರು ಹಣಕಾಸು ಅಧಿಕಾರಿಗಳಾಗಿ (ಪ್ರಭಾರ) ಕಾರ್ಯನಿರ್ವಹಿಸುತ್ತಿದ್ದಾರೆ.


ಗದಗ ಪ್ರದೇಶದ ಇತಿಹಾಸ ಹಾಗೂ ಪರಿಚಯ

ಗದಗ ಕರ್ನಾಟಕದ ಮಧ್ಯಭಾಗದಲ್ಲಿ ಇರುವ ಜಿಲ್ಲಾ ಕೇಂದ್ರವಾಗಿದ್ದು, ಇಲ್ಲಿ ಗ್ರಾಮೀಣ ಸೊಗಡು ಇನ್ನೂ ಮಾಯವಾಗದೇ ಇರುವುದು ವಿಶೇಷ. ಕನ್ನಡ ಸಾಹಿತ್ಯದ ಮೇರು ಕೃತಿ ‘ಗದುಗಿನ ಭಾರತ’ ರಚಿಸಿದ ಕವಿ ಕುಮಾರವ್ಯಾಸನ ಕರ್ಮಭೂಮಿ. ಇದು ಕೃಷಿ ವ್ಯವಸಾಯ ಪ್ರಮುಖ ಕೇಂದ್ರವಾಗಿದ್ದು, ಸಹಕಾರೀ ರಂಗದಲ್ಲಿ ಪ್ರಮುಖ ಸ್ಥಾನ ಪಡೆದ ಸ್ಥಳವಾಗಿದೆ ಹಾಗೂ ರಾಜ್ಯದ ಬೇರೆ ನಗರಗಳಿಂದ ಉತ್ತಮ ರೈಲು ಹಾಗೂ ರಸ್ತೆ ಸಂಪರ್ಕ ಹೊಂದಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸುಮಾರು 55 ಕಿ.ಲೋ ದೂರದಲ್ಲಿರುತ್ತದೆ. ಗದಗ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಪಶು ವೈದ್ಯಕೀಯ ಕಾಲೇಜು, ಖಾಸಗೀ ಕ್ಷೇತ್ರದ ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಸಮೀಪದ ಹುಲಕೋಟಿಯಲ್ಲಿ ರೂರಲ್ ಇಂಜಿನಿಯರಿಂಗ್ ಕಾಲೇಜು ಹಾಗೂ ಅನೇಕ ಉತ್ತಮ ವಿದ್ಯಾಸಂಸ್ಥೆಗಳಿದ್ದು ಒಂದು ಶೈಕ್ಷಣಿಕ ತಾಣವಾಗಿದೆ. ಇತಿಹಾಸ ಪ್ರಸಿದ್ಧ ಲಕ್ಕುಂಡಿ ಮಹಾನ್ ಕವಿ ರನ್ನನಿಗೆ ಆಶ್ರಯ ನೀಡಿದ ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ ಮತ್ತು ಹೆಮ್ಮೆಯ ಪ್ರವಾಸಿ ಸ್ಥಳವಾಗಿದ್ದು, ಐತಿಹಾಸಿಕ ಪ್ರಸಿದ್ಧ ಬಾದಾಮಿಯ ಐಹೊಳೆ, ಪಟ್ಟದಕಲ್ಲು ಹಾಗೂ ಹಂಪೆಯಿಂದ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿರುತ್ತವೆ. ಗದಗ, ಸಂಗೀತ ಕ್ಷೇತ್ರದ ಮಹಾನ್ ಚೇತನ ಪಂಚಾಕ್ಷರ ಗವಾಯಿಗಳು, ಡಾ. ಪುಟ್ಟರಾಜ ಗವಾಯಿಗಳು ಹಾಗೂ ಖ್ಯಾತ ಹಿಂದೂಸ್ತಾನಿ ಸಂಗೀತಗಾರರಾದ ಡಾ. ಗಂಗೂಭಾಯಿ ಹಾನಗಲ್ಲ ಮತ್ತು ಡಾ. ಭೀಮಸೇನ ಜೋಷಿ ಇವರ ತವರು ನಾಡು.

ಸುದ್ದಿ ಮತ್ತು ಪ್ರಕಟಣೆ

1
Mar
  • :”ಸ್ವರಾಜ್- ಸ್ವ-ಆಡಳಿತಕ್ಕಾಗಿ ಸ್ಥಳೀಯ ಮಾದರಿಗಳು” ಕಾರ್ಯಕ್ರಮದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರ ಫಲಿಂತಾಶ ಪಟ್ಟಿ
25
Feb
2022-23 ಸಾಲಿನ ಎಂ.ಬಿ.ಎ (ಗ್ರಾಮೀಣ ನಿರ್ವಹಣೆ) ಪ್ರೋಗ್ರಾಮ್ ಪ್ರವೇಶಕ್ಕಾಗಿ ಎರಡನೇ ಸುತ್ತಿನ ತಾತ್ಕಾಲಿಕ ಅರ್ಹತೆ/ಆಯ್ಕೆ ಪಟ್ಟಿ
21
Feb
MBA UET ಶ್ರೇಣಿ ಪಟ್ಟಿ ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿ 2022-23
1
Feb
ಸ್ವಗ್ರಾಮ ಫೆಲೋಶಿಪ್" ಆಯ್ಕೆಯಾಗಿರುವ 75 ತಂಡಗಳ ಪಟ್ಟಿ

ಕಾರ್ಯಕ್ರಮಗಳು

21
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ನಲ್ಲಿ “ರಾಷ್ಟ್ರೀಯ ಏಕೀಕರಣ ಶಿಬಿರ” ಉದ್ಘಾಟನಾ ಸಮಾರಂಭ Read More
20
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಲ್ಲಿ “ಎಸ್.ಬಿ.ಐ ಜನ-ವನ” ಕಾರ್ಯಕ್ರಮದ ಉದ್ಘಾಟನೆ Read More
10
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಆಮಂತ್ರಣ ಪತ್ರಿಕೆ Read More
1
Mar
ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ :”ಸ್ವರಾಜ್- ಸ್ವ-ಆಡಳಿತಕ್ಕಾಗಿ ಸ್ಥಳೀಯ ಮಾದರಿಗಳು” ಕಾರ್ಯಕ್ರಮದ ಉದ್ಘಾಟನೆ Read More


Follow us on