English

ಸಂಶೋಧನೆ, ಅನ್ವೇಷಣೆ ಮತ್ತು ಮೌಲ್ಯಮಾಪನಾ ಕೇಂದ್ರದ ಪ್ರಕಾರ್ಯಗಳು

1.ವಿಶ್ವವಿದ್ಯಾಲಯದ ಎಲ್ಲಾ ಸಂಶೋಧನೆ ಮತ್ತು ಅನ್ವೇಷಣಾ ಚಟುವಟಿಕೆಗಳನ್ನು ಕುಲಪತಿಗಳ ನಿಯಂತ್ರಣದಡಿ  ವಿನಿಯಮಗಳಲ್ಲಿ ನಿಯಮಿಸಲಾದ ರೂಢಿಗಳ ಅನುಸಾರವಾಗಿ ಸಂಶೋಧನೆ, ಅನ್ವೇಷಣೆ ಮತ್ತು ಮೌಲ್ಯಮಾಪನಾ ಕೇಂದ್ರದ ಅಡಿಯಲ್ಲಿ ಅಧಿಕಾರಿಗಳು ಅಥವಾ ಬೋಧಕರು ಅಥವಾ ಸಂಶೋಧಕರ ಮೂಲಕ ನಿರ್ವಹಿಸತಕ್ಕದ್ದು.

2.ಸಂಶೋಧನೆ ಮತ್ತು ಅನ್ವೇಷಣೆ ಕೇಂದ್ರವು ಮುಂದಿನವುಗಳ ಶಿಫಾರಸ್ಸುಗಳನ್ನು ಮಾಡತಕ್ಕದ್ದು,-

(i)ಪರಿಣಾಮಕಾರಿ ಸಮನ್ವಯತೆಯನ್ನು ವೃದ್ಧಿಸುವ ದೃಷ್ಟಿಯೊಂದಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಇನ್ನಿತರ ಸಂಬoಧಿತ ವಸ್ತು ವಿಷಯಗಳಲ್ಲಿ ಹಲವಾರು ವಿಶ್ವ ವಿದ್ಯಾಲಯ ಘಟಕಗಳ ಮೂಲಕ ಕೈಗೆತ್ತಿಕೊಳ್ಳುವ ಅಥವಾ ಕೈಗೆತ್ತಿಕೊಳ್ಳಬೇಕಾದ ಸಂಶೋಧನಾ ಕಾರ್ಯಕ್ರಮಗಳು ಮತ್ತು ಯೋಜನೆಗಳು;

(ii)ಸಂಶೋಧನಾ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಅಗತ್ಯವಿರುವ ಭೌತಿಕ, ವಿತ್ತೀಯ ಮತ್ತು ಆಡಳಿತಾತ್ಮಕ ಸೌಲಭ್ಯಗಳು;

(iii)ಗ್ರಾಮೀಣ ಮಧ್ಯಸ್ಥಗಾರರ(stakeholders) ಅಗತ್ಯತೆಗಳನ್ನು ಪೂರೈಸಲು ಸಂಶೋಧನೆಯನ್ನು ಅಭಿಮುಖವಾಗಿಸುವುದು;

(iv)ಭೋದನೆಯಲ್ಲಿ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಸಂಶೋಧನೆ, ವಿಸ್ತರಣೆ, ಬೋಧನೆ ಹಾಗೂ ಸಂಶೋಧನಾಕಾರರ ಭಾಗವಹಿಸುವಿಕೆಯನ್ನು ಸಂಯೋಜನೆಗೊಳಿಸುವುದು;

(v)ಸoಶೋಧನೆಯಲ್ಲಿ ಸಾರ್ವಜನಿಕ, ಖಾಸಗಿ ಮತ್ತು ಗ್ರಾಮೀಣ ಸಮುದಾಯವನ್ನು ಪೋಷಿಸುವುದು ಮತ್ತು ಸಮನ್ವಯಗೊಳಿಸುವುದು;

(vi)ಅಪ್ಪಟ, ಅನ್ವಯಿಕ ಮತ್ತು ಭಾಗೀದಾರಿಕ ಸಂಶೋಧನೆ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ಗೆ ಬೆಂಬಲಿಸುವ ಅಂಶಗಳು;

(vii)ಸಮುದಾಯಗಳು, ಸರ್ಕಾರ, ಸಂಬoಧಪಟ್ಟ ಸಂಶೋಧನಾ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಘಟನೆಗಳು ಮತ್ತು ಸಂಸ್ಥೆಗಳು ಒಳಗೊಂಡoತೆ, ಇನ್ನಿತರ ಅಭಿವೃದ್ಧಿ ಏಜೆನ್ಸಿಗಳೊಂದಿಗೆ ಪಾಲುದಾರಿಕೆಯಲ್ಲಿ ವಿನೂತನ ಚಟುವಟಿಕೆಗಳು, ಅಭಿವೃದ್ಧಿ ಮತ್ತು ಸಂಶೋಧನೆಯನ್ನು ಉತ್ತೇಜಿಸುವುದು;

(viii)ಪರಸ್ಪರ ಕಲಿಕೆ (cross learning)ವಿನಿಮಯ ಹಾಗೂ ಸಂಶೋಧನಾ ಉದ್ದೇಶಗಳಿಗಾಗಿ ರಾಜ್ಯ ಅಥವಾ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಪಾಲುದಾರಿಕೆ;

(ix)ಸ್ವಾವಲಂಬನೆಯನ್ನು ಸಾಧಿಸಲು ಪರಿಣಾಮಕಾರಿ ಬಳಕೆಗಾಗಿ ಇಂಧನ ಮಾಧ್ಯಮಗಳನ್ನು (ವಿದ್ಯುತ್, ಕಟ್ಟಿಗೆ, ಗಾಳಿ, ಜೈವಿಕ ಅನಿಲ, ಜೀವರಾಶಿ, ಸೌರ) ಮತ್ತು ವ್ಯವಸ್ಥೆಗಳನ್ನು ಒಟ್ಟುಗೂಡಿಸುವುದು;

(x)ಗ್ರಾಮೀಣ ಸಮುದಾಯಗಳಲ್ಲಿ ರೂಢಿಯಲ್ಲಿರುವ ಜನಾಂಗೀಯ ಸಾಂಸ್ಕೃತಿಕ ಪರಂಪರೆ, ಪಾರಂಪರಿಕ ಜ್ಞಾನ ಕೌಶಲತೆ ಮತ್ತು ವ್ಯವಹಾರ ಚಾತುರ್ಯದ ಮೌಲ್ಯಮಾಪನ ಮತ್ತು ವಾಣಿಜ್ಯಕರಣಗೊಳಿಸುವುದಕ್ಕಾಗಿ ಹಾಗೂ ಅನ್ವೇಷಣಾದಾರರಿಗೆ ಹಾಗೂ ಹಿತಾಸಕ್ತರಿಗೆ ಆರ್ಥಿಕ ಲಾಭವನ್ನು ನೀಡುವುದಕ್ಕಾಗಿ ಸಂಶೋಧನಾ ಅವಕಾಶಗಳನ್ನು ಸೃಜಿಸುವುದು;

(xi)ಸಮಗ್ರ ಕೃಷಿ ವ್ಯವಸ್ಥೆ ಮಾರ್ಗದ (ಕೃಷಿ - ತೋಟಗಾರಿಕೆವೃಕ್ಷ ಕೃಷಿ - ಪಶುಸಂಗೋಪನೆ) ಮುಖಾಂತರ ವಿವೇಕಯುತ ಪ್ರಾಕೃತಿಕ ಸಂಪನ್ಮೂಲ ನಿರ್ವಹಣಾ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮತ್ತು ಅತ್ಯಧಿಕ ಆದಾಯ ಉತ್ಪತ್ತಿ ಮಾಡುವ ಮುಖಾಂತರ ಕೃಷಿ ಉತ್ಪಾದನೆಯನ್ನು ಉತ್ತಮಗೊಳಿಸಲು ನೀತಿಗಳನ್ನು ರೂಪಿಸುವುದು ಹಾಗೂ ಆಚರಣೆಗಳನ್ನು ಉತ್ತೇಜಿಸುವುದು;

(xii)ಗ್ರಾಮೀಣ ಮೂಲಸೌಕರ್ಯ, ಕೃಷಿ ಮತ್ತು ಕೃಷಿಯೇತರ ಆಧಾರಿತ ಕೈಗಾರಿಕೆಗಳು, ಉದ್ಯಮಶೀಲತ್ವ ಅಭಿವೃದ್ಧಿ ಹಾಗೂ ಮಾರುಕಟ್ಟೆ ಸಂಬAಧಗಳಿಗಾಗಿ, ಉದ್ಯೋಗ ಮತ್ತು ಸಂಪತ್ತು ಸೃಜನೆಗೆ ಅವಕಾಶ ನೀಡುವ ಮತ್ತು ನಗರಗಳಿಗೆ ವಲಸೆಯನ್ನು ತಪ್ಪಿಸಲು ಸಹಾಯಕವಾಗುವ ನೀತಿಗಳು.

(xiii)ವಿಶ್ವವಿದ್ಯಾಲಯದ ಕುಲಪತಿಗಳು ಅಥವಾ ಕಾರ್ಯನಿರ್ವಾಹಕ ಪರಿಷತ್ತು ಅಥವಾ ಇತರ ಯಾವುದೇ ಪ್ರಾಧಿಕಾರವು ಪ್ರಸ್ತಾಪಿಸಬಹುದಾದಂತಹ ಸಂಶೋಧನಾ ಕಾರ್ಯಕ್ರಮಗಳಿಗೆ ಸಂಬAಧಿಸಿದ ಇತರ ಯಾವುವೇ ವಿಚಾರಗಳು.


ಡಾ. ಗಿರೀಶ್ ದೀಕ್ಷಿತ್

ಸಹಾಯಕ ನಿರ್ದೇಶಕರು

ಸಂಶೋಧನೆ, ಅನ್ವೇಷಣೆ ಮತ್ತು ಮೌಲ್ಯಮಾಪನಾ ಕೇಂದ್ರ

ಕೆ.ಎಸ್.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯ, ಗದಗRead More

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024
31
Jan
2024 ನೇ  ಸಾಲಿನ ನಾಲ್ಕನೇ ವಾರ್ಷಿಕ ಘಟಿಕೋತ್ಸವದ ಪದವಿ ಪ್ರದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ( ಶುಲ್ಕ ವಿವರಗಳು)
29
Jan

2023-24 ನೇ ಸಾಲಿನ  ಎರಡನೇ ಸೆಮಿಸ್ಟರ್ (ರೆಗ್ಯುಲರ್ ಮತ್ತು ರಿಪೀಟರ್ಸ್) ಫಲಿತಾಂಶ ಮತ್ತು ಮರುಮೌಲ್ಯಮಾಪನದ ಅಧಿಸೂಚನೆ

23
Sep
2023ನೇ ಜುಲೈನಲ್ಲಿ ನಡೆದ ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 2ನೇ ಸೆಮಿಸ್ಟರ್, ಬಿ. ಏಸ್ಸಿ (ಎ. ಬಿ. & ಎಫ್.ಫಿ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಪಿ.ಎಚ್ & ಎಸ್ .ಡಬ್ಲ್ಯೂ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಎ. ಬಿ. & ಎಫ್.ಫಿ ) 4ನೇ ಸೆಮಿಸ್ಟರ್ ,ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 4ನೇ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ

ಕಾರ್ಯಕ್ರಮಗಳು

1
Mar
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ನಾಲ್ಕನೇ ಘಟಕಕೋತ್ಸವದ ಅವ್ಹಾನ ಪತ್ರಿಕೆ Read More
20
Feb
ಬೆಳಗಾವಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
12
Feb
ಹಾವೇರಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
3
Feb
ಮಂಡ್ಯ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More


Follow us on