English


ಸ್ವಗ್ರಾಮ ಫೆಲೋಶಿಪ್

  • ಕ.ರಾ. ಗ್ರಾ. ಮತ್ತು ಪಂ. ರಾಜ್ ವಿಶ್ವವಿದ್ಯಾಲಯಲ್ಲಿ "ಸ್ವಗ್ರಾಮ ಫೆಲೋಶಿಪ್: ಪ್ರೇರಣಾ ತರಬೇತಿ ಶಿಬಿರದ" ಉದ್ಘಾಟನಾ ಸಮಾರಂಭ
  • "ಸ್ವಗ್ರಾಮ ಫೆಲೋಶಿಪ್" ಪ್ರೇರಣಾ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿರುವ ಎರಡನೇ ಪಟ್ಟಿ
  • "ಸ್ವಗ್ರಾಮ ಫೆಲೋಶಿಪ್" ಪ್ರೇರಣಾ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿರುವ ಮೊದಲ ಪಟ್ಟಿ

  • ಆನ್ ಲೈನ್ ಮೂಲಕ ಸ್ವಗ್ರಾಮ ಫೆಲೋಶಿಪ್ ಗಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

  • ಅರ್ಜಿ : ಸ್ವಗ್ರಾಮ್ ಫೆಲೋಶಿಪ್ಗಾಗಿ ಅರ್ಜಿ ನಮೂನೆ (ಡೌನ್ಲೋಡ್)
  • ಕೈಪಿಡಿ : ಸ್ವಗ್ರಾಮ ಫೆಲೋಶಿಪ್

-----------------------------------------------------------------------------------------------------------------------

ಸ್ವಗ್ರಾಮ ಫೆಲೋಶಿಪ್

ನಮ್ಮ ಗ್ರಾಮ ನಮ್ಮ ಹೆಮ್ಮೆ

ಬನ್ನಿ ಸ್ವಾವಲಂಬೀ ಗ್ರಾಮ ಸ್ವರಾಜ್ಯದ ಮೂಲಕ ಆತ್ಮನಿರ್ಭರ ಭಾರತಕ್ಕಾಗಿ
ನವನಿರ್ಮಾಣದ ಹೊಸಮನ್ವಂತರಕ್ಕೆ ಸಂಕಲ್ಪ ಮಾಡೋಣ.

                                                                                                                                               

ಸ್ವಾತಂತ್ರ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ಗ್ರಾಮ ಸ್ವರಾಜ್ಯದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಸ್ವಾವಲಂಬಿ ಗ್ರಾಮಗಳು ಆದರ್ಶಪ್ರಾಯವಾಗಿವೆ. ಹಿಂದಿನಿಂದಲೂ ಗ್ರಾಮಗಳಿಂದಲೇ ಸ್ವರಾಜ್ಯ, ಸನ್ನಡತೆ, ಸಚ್ಚಾರಿತ್ರ,ಸಂಸ್ಕಾರಯುತ ನಾಗರೀಕರು ಹುಟ್ಟುತ್ತಿದ್ದಾರೆ.

     ಭಾರತೀಯ ಗ್ರಾಮಗಳ ಸಂಸ್ಕೃತಿಯ ಪರಿಸ್ಥಿತಿ ಸ್ವತಂತ್ರಭಾರತದಲ್ಲಿ ಅಧೋಗತಿಯೆಡೆಗೆ ಪಯಣಿಸುತ್ತಿದೆ. ಭಾರತದಲ್ಲಿ ಒಂದುವರೆ ಶತಮಾನಗಳಿಂದ ಗ್ರಾಮೋತ್ಥಾನದ ಕುರಿತು ಆಗಾಧ ಚಿಂತನೆಗಳು ಮತ್ತು ಪ್ರಯೋಗಗಳು ನಿರಂತರವಾಗಿ ನಡದೇ ಇವೆ. ಆದರೂ ಇಂದು ಗ್ರಾಮೋತ್ಥಾನ ಮರಿಚಿಕೆಯಾಗಿಯೇ ಉಳಿದಿದೆ. ಹಾಗೆಂದ ಮಾತ್ರಕ್ಕೆ ಗ್ರಾಮೋತ್ಥಾನ ಅವಗಣನೆಗೆ ಒಳಪಟ್ಟಿದೆಯೆಂದಲ್ಲ. ಕೆಲವರು  ಶಿಕ್ಷಣ, ಆರೋಗ್ಯ, ಕೃಷಿಯನ್ನು ಕೇಂದ್ರವಾಗಿರಿಸಿಕೊಂಡು ಗ್ರಾಮೋತ್ಥಾನಕ್ಕಾಗಿ ಸಾಕಷ್ಟು ದುಡಿದದ್ದೂ ಇದೆ. ಸರ್ವೋದಯದ ಮಾದರಿಗಳೂ ನಮ್ಮ ಮುಂದಿವೆ. ಸರ್ಕಾರಗಳು ಗ್ರಾಮಾಭ್ಯುದಯದ ಸರಿಯಾದ ಮಾದರಿಗಳಿಗಾಗಿ ಹುಡುಕಾಡುತ್ತಲೇ ಇವೆ. ಇವೆಲ್ಲದರ ನಡುವೆ ಗ್ರಾಮಗಳು ಮತ್ತು ಗ್ರಾಮಸ್ಥರು ಸರ್ವತೋಮುಖವಾಗಿ ಹಿನ್ನೆಲೆಗೆ ಸರಿಯುತ್ತಿರುವುದು ಅಷ್ಟೇ ಸತ್ಯ. ಗ್ರಾಮದ ಸ್ವಭಾವ ಮತ್ತು ಅಂತಸತ್ವವನ್ನು ಗುರುತಿಸದೆ, ಪಶ್ಚಿಮದಿಂದ ಎರವಲುಪಡೆದ ಪರಕೀಯ ಮತ್ತು ಭೌತಿಕ ಅಭಿವೃದ್ಧಿಯ ಮಾದರಿಗಳ ಕಡೆಗೆ ಒತ್ತಾಯಪೂರ್ವಕವಾಗಿ ಗ್ರಾಮಗಳನ್ನು ದೂಡಿ, ಗ್ರಾಮ ಸ್ವರಾಜ್ಯವೆಂದರೆ ಪರಾವಲಂಬನೆ ಎನ್ನುವಂತೆ ಮಾಡಿವೆ. ಗ್ರಾಮವೊಂದರ ಅಂತಃಸತ್ವದ ಆಧಾರದ ಮೇಲೆ ಗ್ರಾಮದ ಜನರೇ ನಿರ್ಣಯಿಸಿ ಕಟ್ಟಬೇಕಾಗಿರುವ ಸ್ವಾವಲಂಬೀ ಗ್ರಾಮವನ್ನು, ಪ್ರಭುತ್ವದ ಕೆಲವು ಕಚೇರಿಗಳ ಕೆಲಸವನ್ನಾಗಿ ಪರಿರ್ವತಿಸಲಾಗಿದೆ.

ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಆತ್ಮನಿರ್ಭರ ಭಾರತದ ಕನಸನ್ನು ಕಾಣಬೇಕೆಂದರೆ, ಅದು ಸ್ವಾಲವಂಬೀ ಗ್ರಾಮದ ಕಡೆಗೆ ಹೆಜ್ಜೆ ಹಾಕುವುದೆಂದೇ ಅರ್ಥ. ಈ ನಡೆ ಹೊಸತನದ ವಿರೋಧಿಯಲ್ಲ, ಬದಲಿಗೆ ಹೊಸಚಿಗುರು ಹಳೆಬೇರು ಎನ್ನುವ ವಾಕ್ಯದಂತೆ. ಆತ್ಮನಿರ್ಭರ ಭಾರತವೆಂದರೇ, ಸಮಗ್ರವಿಕಾಸದ ಕಲ್ಪನೆಯಡಿ, ಗ್ರಾಮಗಳ ಸ್ವಭಾವಗಳನ್ನು ಆಧರಿಸಿ, ಗ್ರಾಮಸ್ಥರೇ ನಿರ್ಣಯಿಸಿ ಕ್ರಿಯಾನ್ವಯಗೊಳಿಸುವ ಅಭ್ಯುತ್ಥಾನ ಪಥ. ಇಂತಹ ಒಂದು ಮಾದರಿಯನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ, ಗ್ರಾಮ ವಿಕಾಸದ ಮಾದರಿಗಳನ್ನು ರೂಪಿಸಲು ಯೂತ್ ಫಾರ್ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಪ್ರಜ್ಞಾಪ್ರವಾಹ ಮತ್ತು ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್ ಅಧ್ಯಯನ ಪೀಠದ ಸಹಯೋಗದೊಂದಿಗೆ ಸ್ವಗ್ರಾಮ ಫೆಲೋಷಿಪ್ ಅನ್ನು ಆರಂಭಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಶ್ರೀ ಅಭಿಷೇಕ್ ಹೆಚ್.ಈ : 9206808889

ಶ್ರೀ ಲಿಂಗರಾಜು ನಿಡುವಣಿ : 8050501377

Email: swagramafellowship@gmail.com

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024
31
Jan
2024 ನೇ  ಸಾಲಿನ ನಾಲ್ಕನೇ ವಾರ್ಷಿಕ ಘಟಿಕೋತ್ಸವದ ಪದವಿ ಪ್ರದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ( ಶುಲ್ಕ ವಿವರಗಳು)
29
Jan

2023-24 ನೇ ಸಾಲಿನ  ಎರಡನೇ ಸೆಮಿಸ್ಟರ್ (ರೆಗ್ಯುಲರ್ ಮತ್ತು ರಿಪೀಟರ್ಸ್) ಫಲಿತಾಂಶ ಮತ್ತು ಮರುಮೌಲ್ಯಮಾಪನದ ಅಧಿಸೂಚನೆ

23
Sep
2023ನೇ ಜುಲೈನಲ್ಲಿ ನಡೆದ ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 2ನೇ ಸೆಮಿಸ್ಟರ್, ಬಿ. ಏಸ್ಸಿ (ಎ. ಬಿ. & ಎಫ್.ಫಿ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಪಿ.ಎಚ್ & ಎಸ್ .ಡಬ್ಲ್ಯೂ ) 2ನೇ ಸೆಮಿಸ್ಟರ್,ಬಿ. ಏಸ್ಸಿ (ಎ. ಬಿ. & ಎಫ್.ಫಿ ) 4ನೇ ಸೆಮಿಸ್ಟರ್ ,ಬಿ. ಏಸ್ಸಿ (ಜಿ.ಐ.ಎಸ್ & ಸಿ.ಎಸ್ ) 4ನೇ ಸೆಮಿಸ್ಟರ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ

ಕಾರ್ಯಕ್ರಮಗಳು

21
Jun
10ನೇ ಅಂತರಾಷ್ಟ್ರೀಯ ಯೋಗ ದಿನಾಚರೆಣೆ-2024 Read More
15
Jun
10ನೇ ಅಂತರಾಷ್ಟ್ರೀಯ ಯೋಗ ದಿನಾಚರೆಣೆ-2024 Read More
10
Jun
ದಾವಣಗೆರೆ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
5
Jun
ವಿಶ್ವ ಪರಿಸರ ದಿನಾಚರಣೆ-2024 Read More


Follow us on