English
ಶಾಲೆಯ ಪ್ರಕಾರ್ಯಗಳು

        ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಶಾಲೆ

  • ಪಂಚಾಯತ್ ರಾಜ್‌ನ ಭಾಗವಹಿಸುವಿಕೆ, ಬಲಪಡಿಸುವಿಕೆ, ವಿಕೇಂದ್ರೀಕರಣ, ಅಭಿವೃದ್ಧಿ ಚಟುವಟಿಕೆ ಇತ್ಯಾದಿಗಳನ್ನು ಅಧಿಕಗೊಳಿಸುವ ಕ್ಷೇತ್ರದಲ್ಲಿನ ಅಧ್ಯಯನ ಮತ್ತು ಸಂಶೋಧನೆಯನ್ನು ಪ್ರವರ್ತಿಸುವುದು.
  • ಪಂಚಾಯತ್ ರಾಜ್ ಸಂಸ್ಥೆಗಳ ಜನ ಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮುಂತಾದವರಿಗೆ ಅಭಿವಿನ್ಯಾಸ/ ಪುನಶ್ಚೇತನ ಕಾರ್ಯಕ್ರಮಗಳನ್ನು ಸಂಘಟಿಸಲು ಸಮುಚಿತ ಪ್ರಾಧಿಕಾರಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು.
  • ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ಸಂವಿಧಾನಿಕ ಉಪಬಂಧಗಳಿಗೆ ಮತ್ತು ಸಂಬಂಧಿತ ಕಾನೂನುಗಳ ಅನುಷ್ಠಾದಲ್ಲಿನ ಅಡ್ಡಿ – ಆತಂಕಗಳ (Bottlenecks) ಬಗೆಗೆ ಅಧ್ಯಯನ ಮಾಡುವುದು ಮತ್ತು ಸುಧಾರಣೆಗಳನ್ನು ಸೂಚಿಸುವುದು.
  • ಸ್ತ್ರೀಯರ, ದುರ್ಬಲ ವರ್ಗದವರ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಲು ಕಾರ್ಯತಂತ್ರಗಳನ್ನು ರೂಪಿಸುವುದು.
  • ಪಂಚಾಯತ್ ರಾಜ್ ಸಂಸ್ಥೆಗಳ ಉತ್ತಮ ಆಚರಣೆಗಳನ್ನು ರೂಪಿಸುವುದು ಮತ್ತು ಪ್ರಕಟಣೆ ಮತ್ತು ಸಂಪರ್ಕ ಸಂವಹನ ಮಾಧ್ಯಮಗಳ ಮುಖಾಂತರ ಅವನ್ನು ಪ್ರಚುರಪಡಿಸಲು ಏರ್ಪಾಡು ಮಾಡುವುದು.ಸಂಪರ್ಕ-ಸಂವಹನಾಭಿವೃದ್ಧಿ ಅಧ್ಯಯನ ಮಾಡುವುದು.

ಪರಿಸರ ವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯ ಹಾಗೂ ನೈರ್ಮಲ್ಯ ವ್ಯವಸ್ಥಾಪನಾ ಶಾಲೆ

·       ·   ಪರಿಸರ ಸಮಸ್ಯೆಗಳು ಮತ್ತು ಮಾನವನ ಆರೋಗ್ಯ, ಕೃಷಿ ಉತ್ಪಾದನೆ, ಜಲಮಾಲಿನ್ಯ, ನೀರಿನ ಕೊರತೆ, ವಾಯು ಮಾಲಿನ್ಯ, ಮಣ್ಣಿನ ಸವೆತ, ಅರಣ್ಯ ನಾಶ, ಜೈವಿಕ ವೈವಿಧ್ಯತೆ ನಷ್ಟ, ಹವಾಮಾನ ಬದಲಾವಣೆ ಮುಂತಾದವುಗಳ ಮೇಲೆ ಅವುಗಳ ಪರಿಣಾಮವನ್ನು ಕುರಿತು ಅಧ್ಯಯನ ಮಾಡುವುದು.
·       ಬರ, ಪ್ರವಾಹ, ಭೂಕಂಪ, ಕಾಡ್ಗಿಚ್ಚು ಮುಂತಾದವುಗಳA ಪ್ರಕೃತಿಕ ವಿಕೋಪಗಳ ವಿರುದ್ಧ ವಿಪತ್ತು ನಿರ್ವಹಣೆ, ಪುನಃಸ್ಥಾಪನೆ ಮತ್ತು ಪುನರ್ವಸತಿ ಪರಿಹಾರ ಕಾರ್ಯತಂತ್ರಗಳನ್ನು ರೂಪಿಸುವುದು.
·       ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಇಂಧನ ಉಳಿತಾಯ, ಇಂಧನ ಕಾರ್ಯಕ್ಷಮತೆ ಮತ್ತು ಸಂಪ್ರದಾಯಿಕವಲ್ಲದ  ಇಂಧನ ಬಳಕೆ, ಸೌರಶಕ್ತಿ ಮತ್ತು ವಾಯು ಇಂಧನ, ಜೈವಿಕ ರಾಶಿ, ಜೈವಿಕ ಅನಿಲ, ಗೋಬರ್ ಅನಿಲ ಬಳಕೆಯಂಥ ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲು ಜನರನ್ನು ಉತ್ತೇಜಿಸುವುದು.
·       ಜಲಾನಯನ ನಿರ್ವಹಣೆ, ಜಲಸಂಪನ್ಮೂಲಗಳ ಸರಬರಾಜು ಮತ್ತು ಸಂರಕ್ಷಣೆ, ಸರೋವರ, ತೊರೆ ಮತ್ತು ನದಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ತಾಂತ್ರಿಕತೆಗಳನ್ನು ವಿಕಾಸಗೊಳಿಸುವುದು.