ಕನ್ನಡ

ಶಾಲೆಯ ಪ್ರಕಾರ್ಯಗಳು

      ಸಾಮಾಜಿಕ ವಿಜ್ಞಾನ ಮತ್ತು ಗ್ರಾಮೀಣ ಪುನಾರಚನಾ ಶಾಲೆ

  • ಕರ್ನಾಟಕದ ಗ್ರಾಮೀಣ ಸಮಾಜಶಾಸ್ತç, ಸಂಸ್ಕೃತಿ, ತತ್ವಶಾಸ್ತç ಮತ್ತು ಧಾರ್ಮಿಕ ಮೌಲಿಕ ವ್ಯವಸ್ಥೆಗಳ ಅಧ್ಯಯನ ಮಾಡುವುದು.
  • ಗ್ರಾಮೀಣ ಜನತೆಯ ಶಿಕ್ಷಣ ಮತ್ತು ಅವರ ದೇಶೀಯ ಜ್ಞಾನ ಮತ್ತು ಕೌಶಲ್ಯತೆಯ ಪ್ರಯೋಜನ ಪಡೆಯಲು ಸಾಮಾಜಿಕ ಆಂದೋಲನವನ್ನು ರೂಪಿಸುವುದು.
  • ವಿವಿಧ ಬೆಂಬಲಿತ ವ್ಯವಸ್ಥೆಗಳು ಮತ್ತು ಪುನರ್ವಸತಿ ಕಾರ್ಯಕ್ರಮಗಳ ಮೂಲಕ ವಿಕಲಚೇತನ ವ್ಯಕ್ತಿಗಳು, ನಿರ್ಗತಿಕ ಮತ್ತು ವಯಸ್ಸಾದ ವ್ಯಕ್ತಿಗಳನ್ನು ಸಬಲೀಕರಿಸುವುದು.
  • ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವಿನ ಅಂತರಗಳನ್ನು ಕಡಿಮೆ ಮಾಡಲು ವಿನೂತನ ವಸತಿ ಮತ್ತು ಆವಾಸ ಸ್ಥಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು.
  • ಸಹಭಾಗಿತ್ವ ಗ್ರಾಮೀಣ ಮೌಲ್ಯನಿರ್ಣಯ (ಪಿಆರ್) ತಂತ್ರಗಳo ಸಾಮಾಜಿಕ ಸ್ವರೂಪ ನಿರ್ಣಯ   ಸಹಭಾಗಿತ್ವ ಮಾರ್ಗಗಳ  ಮೂಲಕ ಎಲ್ಲಾ ಸಮುದಾಯಗಳ ಕ್ಷೇಮಾಭಿವೃದ್ಧಿಗಾಗಿ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು.
  • ಸಮಾಜದ ಆರ್ಥಿಕವಾಗಿ ದುರ್ಬಲರಾದ ವರ್ಗದವರಲ್ಲಿ ಸಾಮಾಜಿಕ ಉದ್ಯಮಶೀಲತೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.
  • ಸಾಮಾಜಿಕ ಸಮಸ್ಯೆಗಳ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕೈಗೊಳ್ಳುವುದು ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಮುಖಾಂತರ ಪರಿಹಾರಗಳನ್ನು ಕಂಡುಹಿಡಿಯುವುದು.
  • ಲಿo ವಿವಾದಗಳು, ಬಾಲಕಾರ್ಮಿಕರು, ಜೀತದಾಳುಗಳು ಮತ್ತು ದೇವದಾಸಿ ಪದ್ಧತಿ ಮುಂತಾದA ಅನಿಷ್ಟ ಆಚರಣೆಗಳ ವಿಷಯಗಳ ಕುರಿತಾದ ಕ್ಷೇತ್ರದಲ್ಲಿ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವುದು.
  • ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳಿಂದ ಬರುವ ನಿಧಿಗಳನ್ನು ಸೂಕ್ತ ಯೋಜನೆಗಳು ಮತ್ತು ನಾವಿನ್ಯತಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ವಿನಿಯೋಗಿಸುವುದು.
  • ವಿವಿಧ ಸಾಮಾಜಿಕ ಸಮೂಹಗಳ, ಅದರಲ್ಲೂ ವಿಶೇಷವಾಗಿ ಪಂಚಾಯತ್ ರಾಜ್ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವುದು.
  • ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಮೂಲಕ ಅನುಷ್ಠಾನಗೊಂಡಿರುವ ಯೋಜನೆಗಳ ಮೌಲ್ಯ ನಿರ್ಧರಣೆ ಮತ್ತು ಮೌಲ್ಯಮಾಪನ ಅಧ್ಯಯನಗಳನ್ನು ನಡೆಸುವುದು.
  • ಅಧಿಸೂಚಿಸಿರದ ಬುಡಕಟ್ಟುಗಳು, ತಮ್ಮದೇ ಆದ ಮನೆ, ಗ್ರಾಮ ಅಥವಾ ಭೂಮಿಗಳನ್ನು ಹೊಂದಿರದ ಜನರು, ಅಲೆಮಾರಿಗಳು ಮತ್ತು ಅರೆ ಅಲೆಮಾರಿ ಸಮುದಾಯಗಳು, ಬುಡಕಟ್ಟುಗಳು ಮುಂತಾದo ಎಲ್ಲಾ ಸಮುದಾಯಗಳ ಮತ್ತು ಅಭಿವೃದ್ಧಿಯಾಗಿಲ್ಲದ ಸಾಮಾಜಿಕ ಸಮೂಹಗಳ ಕ್ಷೇಮಾಭಿವೃದ್ಧಿಗೆ ಸಂಬAಧಿಸಿದ ನೀತಿಯ ಮೇಲೆ ಸರ್ಕಾರಕ್ಕೆ ಸಲಹೆ ನೀಡುವುದು.
  • ವಿಚಾರ ಸಂಕಿರಣಗಳು, ಕಾರ್ಯಗಾರಗಳು, ಕ್ಷೇತ್ರಕಾರ್ಯವಿಭಾಗ, ವಿದ್ಯಾರ್ಥಿಗಳ ಸಾಮಾಜಿಕಾಭಿವೃದ್ಧಿ ಪ್ರಯೋಗಾರ್ಥಿಗಳ ಭಾಗೀದಾರರು, ಜನಪ್ರತಿನಿಧಿಗಳು ಮುಂತಾದವರಿಗೆ ವ್ಯಾಸಂಗ ಕ್ರಮ ವಿಷಯಗಳನ್ನು (Course contents) ಅಭಿವೃದ್ಧಿಪಡಿಸುವುದು.

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024 Read More

ಕಾರ್ಯಕ್ರಮಗಳು

21
Jun
10ನೇ ಅಂತರಾಷ್ಟ್ರೀಯ ಯೋಗ ದಿನಾಚರೆಣೆ-2024 Read More
15
Jun
10ನೇ ಅಂತರಾಷ್ಟ್ರೀಯ ಯೋಗ ದಿನಾಚರೆಣೆ-2024 Read More
10
Jun
ದಾವಣಗೆರೆ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
5
Jun
ವಿಶ್ವ ಪರಿಸರ ದಿನಾಚರಣೆ-2024 Read More


Follow us on