ಕನ್ನಡ

ಶಾಲೆಯ ಪ್ರಕಾರ್ಯಗಳು

    ಕೌಶಲ್ಯ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಶಾಲೆ

  •   ಎಲ್ಲಾ ವಿವಿಧ ಕರಕುಶಲತೆಯನ್ನು ಉತ್ತೇಜಿಸುವುದು, ಅಭಿವೃದ್ಧಿಪಡಿಸುವುದು ಮತ್ತು ವಿನ್ಯಾಸಗೊಳಿಸುವುದು.
  • ಗ್ರಾಮೀಣ ಪ್ರದೇಶದಲ್ಲಿನ ಅತ್ಯಂತ ಕೌಶಲ್ಯ ಇರುವ ಗ್ರಾಮೀಣ ಕುಶಲಕರ್ಮಿಗಳನ್ನು ಗುರುತಿಸುವುದು ಮತ್ತು ಅವರ ಕೌಶಲ್ಯಗಳು ಇತರ ಕುಶಲಕರ್ಮಿಗಳಿಗೆ ಪ್ರಚುರಪಡಿಸುವುದು;
  • ವಿನೂತನ ಮತ್ತು ಉಪಯುಕ್ತ ಕೃಷಿ ಸಾಧನಗಳನ್ನು ಮತ್ತು ಸಲಕರಣೆಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು;
  • ವಿವಿಧ ಬಗೆಯ ಆಹಾರ ಧಾನ್ಯಗಳು, ಆಹಾರೋತ್ಪನ್ನಗಳು, ಹಣ್ಣುಗಳು ಮತ್ತು ತರಕಾರಿಗಳಿಗಾಗಿ ದಾಸ್ತಾನು ಸೌಕರ್ಯಗಳನ್ನು ಅನ್ವೇಷಿಸುವುದು, ವಿನ್ಯಾಸಮಾಡುವುದು ಮತ್ತು ಅಭಿವೃದ್ಧಿಪಡಿಸುವುದು;
  • ವಿವಿಧ ಬಗೆಯ ಕೃಷಿ, ಹೈನು, ಪ್ರಾಣಿ ಮತ್ತು ತೋಟಗಾರಿಕಾ ಉತ್ಪನ್ನಗಳಿಗಾಗಿ ಪ್ಯಾಕ್ ಮಾಡುವ ಸಾಮಗ್ರಿಯನ್ನು ಮತ್ತು ಸಂರಕ್ಷಣಾ ತಂತ್ರಗಳನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು;
  • ತೋಟಗಾರಿಕೆ ಮತ್ತು ಪುಷ್ಪ ಕೃಷಿ, ರೇಷ್ಮೆ ಕೃಷಿ ಮುಂತಾದ ಕ್ಷೇತ್ರದಲ್ಲಿ ವಿನೂತನ ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವುದು;
  • ಜಾಗತಿಕ ಮಾರುಕಟ್ಟೆಗಳ ಅವಶ್ಯಕತೆಗಳಿಗೆ ಪಾಲುದಾರರನ್ನು ಪರಿಚಯಿಸುವುದು;
  • ಸಿರಿಧಾನ್ಯಗಳು (millets) ತರಕಾರಿಗಳು ಮುಂತಾದA ಪೌಷ್ಠಿಕಾಂಶಯುಕ್ತ, ಕಡಿಮೆ ವೆಚ್ಚದ, ದೇಶೀಯ ಆಹಾರ ಉತ್ಪನ್ನಗಳ ಉತ್ಪಾದನೆಗಾಗಿ ರೈತರಿಗೆ ಉತ್ತೇಜನ ನೀಡುವುದು;
  • ದೇಶೀಯ ಮತ್ತು ಪೌಷ್ಠಿಕಾಂಶಯುಕ್ತ ಬೆಳೆಗಳು, ತರಕಾರಿ ಮತ್ತು ಹಣ್ಣುಗಳ ಮಾದರಿ ಕೃಷಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು;
  • ನಿಷ್ಕೃಷ್ಟ (precision) ಬೇಸಾಯಕ್ಕಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದಲ್ಲಿ ಕೃಷಿ ಭೂಮಿಗಳನ್ನು ದತ್ತು ತೆಗೆದುಕೊಳ್ಳುವುದು;
  • ಪಾಳುಭೂಮಿ, ಚವಳುಭೂಮಿ, ಜೌಗುಭೂಮಿ, ಕ್ಷಾರೀಯಭೂಮಿ ಹಾಗೂ ಇನ್ನಿತರ ಸಮಸ್ಯಾತ್ಮಕ ಭೂಮಿಗಳನ್ನು ಸಾಗುವಳಿ ಮತ್ತು ಪ್ರಯೋಜನದ ಅಡಿಯಲ್ಲಿ ತರಲು ಅವುಗಳಿಗಾಗಿ ವಿನೂತನ ವಿಧಾನಗಳನ್ನು ಮತ್ತು ಕಾರ್ಯತಂತ್ರಗಳನ್ನು ರೂಪಿಸುವುದು;
  • ನೀರು ಮತ್ತು ಇಂಧನದ ಸ್ವಾವಲಂಬನೆ ಮತ್ತು ಸಮರ್ಥ ಬಳಕೆಯನ್ನು ಸೃಜಿಸುವುದು;
  • ಹಣ್ಣು ಮತ್ತು ಮರಮುಟ್ಟುಗಳ ರೂಪದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳನ್ನು ಹಾಗೂ ಉಪಯುಕ್ತವಾಗುವ ಗಿಡಮರಗಳನ್ನು ಬೆಳೆಸಲು ಉತ್ತೇಜಿಸುವುದು ಮತ್ತು ಜೈವಿಕ ವೈವಿದ್ಯತೆಯನ್ನು ನಿರ್ವಹಿಸುವುದು;
  • ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಉದ್ಯಮಶೀಲತ್ವವನ್ನು ಉತ್ತೇಜಿಸಲು ಸಾಮರ್ಥ್ಯ ವೃದ್ಧಿಗಾಗಿ ಕ್ಷೇತ್ರೀಯ ಮತ್ತು ಕ್ಷೇತ್ರೀಯೇತರ ತರಬೇತಿ ಕಾರ್ಯಕ್ರಮಗಳನ್ನು, ಕಾರ್ಯಗಾರಗಳನ್ನು, ವಿಚಾರ ಸಂಕಿರಣಗಳನ್ನು ಆಯೋಜಿಸುವುದು;
  • ಆರ್ಥಿಕ ವ್ಯವಸ್ಥಾಪನೆಯಲ್ಲಿ ಹಿತಾಸಕ್ತರಿಗೆ ತರಬೇತಿ ನೀಡುವುದು;
  • ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲ ಲಭ್ಯತೆಯ ಬಗ್ಗೆ ಮಾಹಿತಿಯನ್ನು ಪ್ರಚುರಪಡಿಸುವುದು;
  • ವ್ಯಕ್ತಿಗತ ವ್ಯವಹಾರ ಯೋಜನೆಗಳು ಮತ್ತು ಅಂಕಣಿತ ಯೋಜನೆಗಳನ್ನು ಸಿದ್ಧಪಡಿಸುವುದು


ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024 Read More

ಕಾರ್ಯಕ್ರಮಗಳು

21
Jun
10ನೇ ಅಂತರಾಷ್ಟ್ರೀಯ ಯೋಗ ದಿನಾಚರೆಣೆ-2024 Read More
15
Jun
10ನೇ ಅಂತರಾಷ್ಟ್ರೀಯ ಯೋಗ ದಿನಾಚರೆಣೆ-2024 Read More
10
Jun
ದಾವಣಗೆರೆ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
5
Jun
ವಿಶ್ವ ಪರಿಸರ ದಿನಾಚರಣೆ-2024 Read More


Follow us on