ಕನ್ನಡ

ಶಾಲೆಯ ಪ್ರಕಾರ್ಯಗಳು

ಪರಿಸರ ವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯ ಹಾಗೂ ನೈರ್ಮಲ್ಯ ವ್ಯವಸ್ಥಾಪನಾ ಶಾಲೆ

·       ·   ಪರಿಸರ ಸಮಸ್ಯೆಗಳು ಮತ್ತು ಮಾನವನ ಆರೋಗ್ಯ, ಕೃಷಿ ಉತ್ಪಾದನೆ, ಜಲಮಾಲಿನ್ಯ, ನೀರಿನ ಕೊರತೆ, ವಾಯು ಮಾಲಿನ್ಯ, ಮಣ್ಣಿನ ಸವೆತ, ಅರಣ್ಯ ನಾಶ, ಜೈವಿಕ ವೈವಿಧ್ಯತೆ ನಷ್ಟ, ಹವಾಮಾನ ಬದಲಾವಣೆ ಮುಂತಾದವುಗಳ ಮೇಲೆ ಅವುಗಳ ಪರಿಣಾಮವನ್ನು ಕುರಿತು ಅಧ್ಯಯನ ಮಾಡುವುದು.
·       ಬರ, ಪ್ರವಾಹ, ಭೂಕಂಪ, ಕಾಡ್ಗಿಚ್ಚು ಮುಂತಾದವುಗಳA ಪ್ರಕೃತಿಕ ವಿಕೋಪಗಳ ವಿರುದ್ಧ ವಿಪತ್ತು ನಿರ್ವಹಣೆ, ಪುನಃಸ್ಥಾಪನೆ ಮತ್ತು ಪುನರ್ವಸತಿ ಪರಿಹಾರ ಕಾರ್ಯತಂತ್ರಗಳನ್ನು ರೂಪಿಸುವುದು.
·       ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಇಂಧನ ಉಳಿತಾಯ, ಇಂಧನ ಕಾರ್ಯಕ್ಷಮತೆ ಮತ್ತು ಸಂಪ್ರದಾಯಿಕವಲ್ಲದ  ಇಂಧನ ಬಳಕೆ, ಸೌರಶಕ್ತಿ ಮತ್ತು ವಾಯು ಇಂಧನ, ಜೈವಿಕ ರಾಶಿ, ಜೈವಿಕ ಅನಿಲ, ಗೋಬರ್ ಅನಿಲ ಬಳಕೆಯಂಥ ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲು ಜನರನ್ನು ಉತ್ತೇಜಿಸುವುದು.
·       ಜಲಾನಯನ ನಿರ್ವಹಣೆ, ಜಲಸಂಪನ್ಮೂಲಗಳ ಸರಬರಾಜು ಮತ್ತು ಸಂರಕ್ಷಣೆ, ಸರೋವರ, ತೊರೆ ಮತ್ತು ನದಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ತಾಂತ್ರಿಕತೆಗಳನ್ನು ವಿಕಾಸಗೊಳಿಸುವುದು.
·       ಪರಿಸರ ಹಾನಿ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಬಡತನದ ನಡುವೆ ಇರುವ ಸಂಬAಧಕ್ಕೆ ಒತ್ತು ನೀಡಿ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವುದು.
·       ಜನಸಂಖ್ಯಾ ಬೆಳವಣಿಗೆ, ಬಡತನ, ಉತ್ಪಾದಕತೆಯ ನಷ್ಟ ಮತ್ತು ಪರಿಸರ ನಾಶದ ನಡುವಿನ ಆಂತರಿಕ ಸಂಬAಧವನ್ನು ಅಧ್ಯಯನ ಮಾಡುವುದುಗ್ರಾಮೀಣ ಪ್ರದೇಶದಲ್ಲಿನ ಸುಸ್ಥಿರ ಬೆಳವಣಿಗೆ ಮತ್ತು ಅರ್ಥಿಕಾಭಿವೃದ್ದಿ ನಡುವಿನ ಆಂತರಿಕ ಸಂಧವನ್ನು ಪರಸ್ಪರ ಬಲಪಡಿಸುವುದು.
·       ಗ್ರಾಮೀಣ ಪ್ರದೇಶದಲ್ಲಿ ನಿರ್ಮಲ ಪರಿಸರ ಪರಿಕಲ್ಪನೆ ಮತ್ತು ಸಮುದಾಯಿಕ ಆರೋಗ್ಯ ಮತ್ತು  ನೈರ್ಮಲ್ಯ ನಿರ್ವಹಣೆ ವಿಷಯಗಳನ್ನು ಅಧ್ಯಯನ ಮಾಡುವುದು.
·       ಹೆಚ್ಚು ಸಕ್ಷಮ ರೀತಿಯಲ್ಲಿ ನಮ್ಮ ಜಲ ಸಂಪನ್ಮೂಲಗಳನ್ನು ನಾವಿನ್ಯತಾ ತಂತ್ರಜ್ಞಾನಗಳನ್ನು ರೂಪಿಸುವುದು. ಅರೆ ಬಂಜರಾದ ಮಳೆನೀರು ಆಧಾರಿತ ಕೃಷಿ ಪ್ರದೇಶಕ್ಕಾಗಿ, ವಿಶೇಷವಾಗಿ ಸ್ಥಳೀಯವಾಗಿ ತಯಾರಿಸಿರುವ, ಯುಕ್ತ ಸಾಧನಗಳನ್ನು ಬಳಸಿ ಕಿರು ನೀರಾವರಿ ತಂತ್ರಜ್ಞಾನವÀನ್ನು ರೂಪಿಸುವುದು. ನೀರಾವರಿ ಪ್ರದೇಶದಲ್ಲಿಯೂ ಸಂಯೋಜಿತ ನೀರು ಬಳಕೆ ವಿಧಾನಗಳಿಗೆ ಪ್ರೋತ್ಸಾಹ ನೀಡುವುದು.
·       ಗ್ರಾಮೀಣ ಪ್ರದೇಶದಲ್ಲಿ ಬಡತನ ನಿರ್ಮೂಲನೆಗೆ ಪ್ರಮುಖವಾಗಿರುವತಂಹ ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ದಿಯಲ್ಲಿ ಅಡಕವಾಗಿರುವ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವುದು.

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024 Read More

ಕಾರ್ಯಕ್ರಮಗಳು

21
Jun
10ನೇ ಅಂತರಾಷ್ಟ್ರೀಯ ಯೋಗ ದಿನಾಚರೆಣೆ-2024 Read More
15
Jun
10ನೇ ಅಂತರಾಷ್ಟ್ರೀಯ ಯೋಗ ದಿನಾಚರೆಣೆ-2024 Read More
10
Jun
ದಾವಣಗೆರೆ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
5
Jun
ವಿಶ್ವ ಪರಿಸರ ದಿನಾಚರಣೆ-2024 Read More


Follow us on