ಕನ್ನಡ

ಶಾಲೆಯ ಪ್ರಕಾರ್ಯಗಳು

      ಸಾಮಾಜಿಕ ವಿಜ್ಞಾನ ಮತ್ತು ಗ್ರಾಮೀಣ ಪುನಾರಚನಾ ಶಾಲೆ

  • ಕರ್ನಾಟಕದ ಗ್ರಾಮೀಣ ಸಮಾಜಶಾಸ್ತç, ಸಂಸ್ಕೃತಿ, ತತ್ವಶಾಸ್ತç ಮತ್ತು ಧಾರ್ಮಿಕ ಮೌಲಿಕ ವ್ಯವಸ್ಥೆಗಳ ಅಧ್ಯಯನ ಮಾಡುವುದು.
  • ಗ್ರಾಮೀಣ ಜನತೆಯ ಶಿಕ್ಷಣ ಮತ್ತು ಅವರ ದೇಶೀಯ ಜ್ಞಾನ ಮತ್ತು ಕೌಶಲ್ಯತೆಯ ಪ್ರಯೋಜನ ಪಡೆಯಲು ಸಾಮಾಜಿಕ ಆಂದೋಲನವನ್ನು ರೂಪಿಸುವುದು.
  • ವಿವಿಧ ಬೆಂಬಲಿತ ವ್ಯವಸ್ಥೆಗಳು ಮತ್ತು ಪುನರ್ವಸತಿ ಕಾರ್ಯಕ್ರಮಗಳ ಮೂಲಕ ವಿಕಲಚೇತನ ವ್ಯಕ್ತಿಗಳು, ನಿರ್ಗತಿಕ ಮತ್ತು ವಯಸ್ಸಾದ ವ್ಯಕ್ತಿಗಳನ್ನು ಸಬಲೀಕರಿಸುವುದು.
  • ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವಿನ ಅಂತರಗಳನ್ನು ಕಡಿಮೆ ಮಾಡಲು ವಿನೂತನ ವಸತಿ ಮತ್ತು ಆವಾಸ ಸ್ಥಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು.
  • ಸಹಭಾಗಿತ್ವ ಗ್ರಾಮೀಣ ಮೌಲ್ಯನಿರ್ಣಯ (ಪಿಆರ್) ತಂತ್ರಗಳo ಸಾಮಾಜಿಕ ಸ್ವರೂಪ ನಿರ್ಣಯ   ಸಹಭಾಗಿತ್ವ ಮಾರ್ಗಗಳ  ಮೂಲಕ ಎಲ್ಲಾ ಸಮುದಾಯಗಳ ಕ್ಷೇಮಾಭಿವೃದ್ಧಿಗಾಗಿ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು.
  • ಸಮಾಜದ ಆರ್ಥಿಕವಾಗಿ ದುರ್ಬಲರಾದ ವರ್ಗದವರಲ್ಲಿ ಸಾಮಾಜಿಕ ಉದ್ಯಮಶೀಲತೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.
  • ಸಾಮಾಜಿಕ ಸಮಸ್ಯೆಗಳ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕೈಗೊಳ್ಳುವುದು ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಮುಖಾಂತರ ಪರಿಹಾರಗಳನ್ನು ಕಂಡುಹಿಡಿಯುವುದು.
  • ಲಿo ವಿವಾದಗಳು, ಬಾಲಕಾರ್ಮಿಕರು, ಜೀತದಾಳುಗಳು ಮತ್ತು ದೇವದಾಸಿ ಪದ್ಧತಿ ಮುಂತಾದA ಅನಿಷ್ಟ ಆಚರಣೆಗಳ ವಿಷಯಗಳ ಕುರಿತಾದ ಕ್ಷೇತ್ರದಲ್ಲಿ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವುದು.
  • ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳಿಂದ ಬರುವ ನಿಧಿಗಳನ್ನು ಸೂಕ್ತ ಯೋಜನೆಗಳು ಮತ್ತು ನಾವಿನ್ಯತಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ವಿನಿಯೋಗಿಸುವುದು.
  • ವಿವಿಧ ಸಾಮಾಜಿಕ ಸಮೂಹಗಳ, ಅದರಲ್ಲೂ ವಿಶೇಷವಾಗಿ ಪಂಚಾಯತ್ ರಾಜ್ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವುದು.
  • ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಮೂಲಕ ಅನುಷ್ಠಾನಗೊಂಡಿರುವ ಯೋಜನೆಗಳ ಮೌಲ್ಯ ನಿರ್ಧರಣೆ ಮತ್ತು ಮೌಲ್ಯಮಾಪನ ಅಧ್ಯಯನಗಳನ್ನು ನಡೆಸುವುದು.
  • ಅಧಿಸೂಚಿಸಿರದ ಬುಡಕಟ್ಟುಗಳು, ತಮ್ಮದೇ ಆದ ಮನೆ, ಗ್ರಾಮ ಅಥವಾ ಭೂಮಿಗಳನ್ನು ಹೊಂದಿರದ ಜನರು, ಅಲೆಮಾರಿಗಳು ಮತ್ತು ಅರೆ ಅಲೆಮಾರಿ ಸಮುದಾಯಗಳು, ಬುಡಕಟ್ಟುಗಳು ಮುಂತಾದo ಎಲ್ಲಾ ಸಮುದಾಯಗಳ ಮತ್ತು ಅಭಿವೃದ್ಧಿಯಾಗಿಲ್ಲದ ಸಾಮಾಜಿಕ ಸಮೂಹಗಳ ಕ್ಷೇಮಾಭಿವೃದ್ಧಿಗೆ ಸಂಬAಧಿಸಿದ ನೀತಿಯ ಮೇಲೆ ಸರ್ಕಾರಕ್ಕೆ ಸಲಹೆ ನೀಡುವುದು.
  • ವಿಚಾರ ಸಂಕಿರಣಗಳು, ಕಾರ್ಯಗಾರಗಳು, ಕ್ಷೇತ್ರಕಾರ್ಯವಿಭಾಗ, ವಿದ್ಯಾರ್ಥಿಗಳ ಸಾಮಾಜಿಕಾಭಿವೃದ್ಧಿ ಪ್ರಯೋಗಾರ್ಥಿಗಳ ಭಾಗೀದಾರರು, ಜನಪ್ರತಿನಿಧಿಗಳು ಮುಂತಾದವರಿಗೆ ವ್ಯಾಸಂಗ ಕ್ರಮ ವಿಷಯಗಳನ್ನು (Course contents) ಅಭಿವೃದ್ಧಿಪಡಿಸುವುದು.

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024 Read More

ಕಾರ್ಯಕ್ರಮಗಳು

24
Apr
ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ "ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ Read More
22
Apr
ಬೀದರ್ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ(2ನೇ ಬ್ಯಾಚ್)” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
16
Apr
ಹಾವೇರಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
2
Apr
ಬೆಳಗಾವಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More


Follow us on