ಕನ್ನಡ

ಶಾಲೆಯ ಪ್ರಕಾರ್ಯಗಳು

ಕೃಷಿ ವ್ಯವಹಾರ ವ್ಯವಸ್ಥಾಪನೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥಾಪನಾ ಶಾಲೆ

·       ರೈತರಿಗೆ ಆಹಾರ ಭದ್ರತೆ ಮತ್ತು ಆದಾಯ ಭದ್ರತೆಗಾಗಿ ಬೆಳೆ ಉತ್ಪಾದನೆಯ ಕಾರ್ಯತಂತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು.

·       ಅಂತರ್ಗತ ಮಾರುಕಟ್ಟೆ ವ್ಯವಸ್ಥೆ ಮತ್ತು ಸರಬರಾಜು ಸರಪಣಿ ವ್ಯವಸ್ಥಾಪನೆ, ದಾಸ್ತಾನು ಹಾಗೂ ಸಕಲ ಹಿಮ್ಮುಖ ಮತ್ತು ಮುಮ್ಮುಖ ಸಂಬಂಧಗಳನ್ನು (backward and forward linkages) ಅಭಿವೃದ್ಧಿ ಪಡಿಸುವುದು.

·       ಕೃಷಿ ಮತ್ತು ಕೃಷಿಯೇತರ ವಲಯಗಳ ಆದಾಯವನ್ನು ಉತ್ತೇಜಿಸಲು ಕೃಷಿ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳ ನಡುವೆ ಪರಿಣಾಮಕಾರಿ ಸಮನ್ವಯ ಸಾಧಿಸಲು ಕಾರ್ಯತಂತ್ರಗಳನ್ನು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.

·       ಮಾರುಕಟ್ಟೆಗಳ ಮತ್ತು ದರಗಳ ಅಪಾಯ ಸಾಧ್ಯತೆಗಳಿಂದ ಮತ್ತು ಅನಿಶ್ಚಿತತೆಗಳಿಂದ ರೈತರನ್ನು ರಕ್ಷಿಸಿ ಅವರ ನೇರ ಭಾಗವಹಿಸುವಿಕೆಯೊಂದಿಗೆ ಕೃಷಿ ಮತ್ತು ಕೃಷಿ ವ್ಯವಹಾರ ಉದ್ಯಮಗಳನ್ನು ಬೆಂಬಲಿಸಲು ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳಿಂದ ಹಣಕಾಸು, ಸಾಲ ಮತ್ತು ಬೆಳೆ ವಿಮೆಯನ್ನು ಖಚಿತಪಡಿಸುವುದು.

·       ಉತ್ಪಾದಕತೆ ಮತ್ತು ಕೃಷಿ ವ್ಯವಹಾರದ ಲಾಭದಾಯಕತೆಯನ್ನು ಪ್ರೋತ್ಸಾಹಿಸಲು ಸರ್ಕಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ, ತೋಟಗಾರಿಕೆ ಹಾಗೂ ಪೂರಕ ವ್ಯವಹಾರಗಳ ಬಗೆಗೆ ಸಮುಚಿತ ನೀತಿಗಳನ್ನು ಸೂಚಿಸುವುದು.

·       ಮಾನವ ಪೌಷ್ಠಿಕತೆ ಕುರಿತು ಒತ್ತು ನೀಡುವ ಜೊತೆಗೆ ಸಮಗ್ರ ಕೃಷಿ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು.

·       ಕೃಷಿ ವ್ಯವಹಾರದಲ್ಲಿ ಮಾರುಕಟ್ಟೆ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಳ್ಳುವುದು ಹಾಗೂ ವಿವಿಧ ಹಣ್ಣುಗಳು, ತರಕಾರಿ ಬೆಳೆಗಳು ಹಾಗೂ ಇತರ ಕೃಷಿ ಉತ್ಪನ್ನಗಳಿಗಾಗಿ ಪ್ರತಿ ವರ್ಷ ಋತುವಿನಿಂದ ಋತುವಿಗೆ ವಿಸ್ತರಣಾ ಸೇವೆಗಳ ಮೂಲಕ ರೈತರಿಗೆ ಮಾಹಿತಿಗಳನ್ನು ಒದಗಿಸುವುದು.        

·       ಕೃಷಿಕರನ್ನು ವ್ಯವಹಾರಸ್ಥರನ್ನಾಗಿ ಭಾಗಿಯಾಗಿಸಿ ಕೃಷಿ ವ್ಯವಹಾರದ ಮುಖಾಂತರ ಕರ‍್ಯತಂತ್ರಗಳನ್ನು ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು. ಇದರಿಂದ ಕೃಷಿಯ ಅಸ್ಥಿರತೆಯು ಕಡಿಮೆಯಾಗುವುದು ಮತ್ತು ಕೃಷಿ ಕರ‍್ಯಾಚರಣೆಯು ಆರ್ಥಿಕವಾಗಿ ಕಾರ್ಯಸಾಧ್ಯವಾಗುವುದು. ಮಿಶ್ರ ಆಹಾರ ಬೆಳೆಗಳು ಮತ್ತು ನಗದು ಬೆಳೆಗಳು ರೈತರ ಕೈಗೆ ಹೆಚ್ಚು ಆದಾಯವನ್ನು ತಂದುಕೊಡುವುದು.

·       ಕೃಷಿ ವ್ಯವಹಾರ ಪ್ರವೃತ್ತವಾಗಿರುವ ರಫ್ತನ್ನು ಉತ್ತೇಜಿಸುವುದು. ವಿಶೇಷವಾಗಿ ಜೈವಿಕ ಗೊಬ್ಬರವನ್ನು ಬಳಸಿ ಬೆಳೆದಿರುವ ಭಾರತದ ಹಣ್ಣು, ಆಹಾರ ಮತ್ತು ಔಷಧಿಯ ಸುಗಂಧ ಮೂಲಿಕೆಗಳಿಗೆ ಬೇಡಿಕೆಯಿರುವುದು. ವಿಶ್ವವಿದ್ಯಾನಿಲಯವು ಈ ರಫ್ತು ಸಾಮರ್ಥ್ಯದ ಪ್ರಯೋಜನವನ್ನು ಪಡೆಯುವುದು ಮತ್ತು ಆಧುನಿಕ ವ್ಯಾಪಾರ ಅವಕಾಶಗಳ ಅನುಕೂಲತೆಗಳನ್ನು ಪಡೆದುಕೊಳ್ಳುವುದು.

·       ಲಾಭದಾಯಕತೆ ಮತ್ತು ಪರಿಣಾಮಕಾರಿ ವಿಸ್ತರಣಾ ಸೇವೆಗಳನ್ನು ಉತ್ತಮಪಡಿಸಲು ಕೃಷಿ ಕ್ರಮೋಪಾಯಗಳಿಗಾಗಿ ಅಪಾಯ ಸಾಧ್ಯತಾ ನಿರ್ವಹಣಾ ಕಾರ್ಯತಂತ್ರಗಳ ಮುಖಾಂತರ ಗ್ರಾಮೀಣ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಸಬಲೀಕರಿಸುವುದು.

·       ಆಹಾರ ಸಂರಕ್ಷಣೆ, ಕೃಷಿ ಉತ್ಪನ್ನಗಳನ್ನು ಪ್ಯಾಕ್ ಮಾಡುವುದು, ಶ್ರೇಣೀಕರಣ ಮಾಡುವುದು ಮತ್ತು ಅಂತರ್‌ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದಕ್ಕಾಗಿ ನಾವಿನ್ಯತಾ ತಂತ್ರಜ್ಞಾನಗಳಿಗಾಗಿ ಕಾರ್ಯನಿರ್ವಹಿಸುವುದು.

·       ವಿಶೇಷ ಕೃಷಿ ವ್ಯವಹಾರ ಮಾದರಿಗಳನ್ನು ವಿಕಾಸಗೊಳಿಸಲು ಮುಖ್ಯ ವ್ಯವಸ್ಥಾಪನಾ ವಿಧಾನಗಳ ಸಮರ್ಪಕ ಸಂಯೋಜನೆಯೊಂದಿಗೆ ವ್ಯವಹಾರ ಸ್ನೇಹಿ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿನ್ಯಾಸಗೊಳಿಸುವುದು.

·       ವ್ಯಾಪಾರ ಸಮಾವೇಶಗಳು, ಕೃಷಿ ಮೇಳಗಳು, ಕೃಷಿ ಯೋಜನೆಗಳು ಮುಂತಾದವುಗಳಂಥ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದನ್ನು ಖಚಿತಪಡಿಸುವುದು.

ಸುದ್ದಿ ಮತ್ತು ಪ್ರಕಟಣೆ

31
Jan
ಡೌನ್‌ಲೋಡ್: ಘಟಿಕೋತ್ಸವ ಅಪ್ಲಿಕೇಶನ್-2024 Read More

ಕಾರ್ಯಕ್ರಮಗಳು

16
Apr
ಹಾವೇರಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
2
Apr
ಬೆಳಗಾವಿ ಜಿಲ್ಲೆ ಗ್ರಾಮ ಪಂಚಾಯತ್ "ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರ ಕಂಪ್ಯೂಟರ್ ಮತ್ತು ಗ್ರಂಥಾಲಯ ನಿರ್ವಹಣೆ” ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Read More
21
Mar
22 ಮತ್ತು 23 , ಮಾರ್ಚ್ 2024 ರಂದು ಕ.ರಾ. ಗ್ರಾ. ಮತ್ತು ಪಂ.ರಾಜ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ, ಸಮಾಜ ಕಾರ್ಯ ಇಲಾಖೆ ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದ ಆಹ್ವಾನ ಪತ್ರಿಕೆ Read More
14
Mar
2024 ರ ರಾಷ್ಟ್ರೀಯ ಏಕೀಕರಣ ಶಿಬಿರ (ಏನ್ಐಸಿ) ದ ಆಹ್ವಾನ ಪತ್ರಿಕೆ Read More


Follow us on